×
Ad

ಇಲಾನ್‌ ಮಸ್ಕ್‌ ರ ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು ಬರುತ್ತಿದೆ ಮೆಟಾ ಸಂಸ್ಥೆಯ ನೂತನ ಅಪ್ಲಿಕೇಶನ್

ಟ್ವಿಟ್ಟರ್‌ ಅನ್ನು ಹೋಲುವ ಹಲವು ಆ್ಯಪ್‌ಗಳು ಹೊರಬಂದಿವೆಯಾದರೂ ಥ್ರೆಡ್ಸ್‌ ಮಾತ್ರ ಟ್ವಿಟ್ಟರ್‌ಗೆ ಪ್ರಬಲ ಸವಾಲೊಡ್ಡುವ ನಿರೀಕ್ಷೆಯಿದೆ

Update: 2023-07-04 14:06 IST

ಸ್ಯಾನ್‌ ಫ್ರಾನ್ಸಿಸ್ಕೋ: ಟ್ವಿಟ್ಟರ್‌ಗೆ ಸೆಡ್ಡು ಹೊಡೆಯಲು ಫೇಸ್ಬುಕ್‌ ಮಾತೃ ಸಂಸ್ಥೆ ಮೆಟಾ ಹೊಸ ಆ್ಯಪ್‌ ಆರಂಭಿಸಲಿದೆ. ಗುರುವಾರ ಈ ಹೊಸ ಆ್ಯಪ್‌ ಆರಂಭಗೊಳ್ಳಲಿದೆ ಎಂದು ಹೇಳಲಾಗಿದೆ.

ಥ್ರೆಡ್ಸ್‌ ಎಂಬ ಹೆಸರಿನ ಈ ಆ್ಯಪ್‌ ಆಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಪ್ರೀ-ಆರ್ಡರ್‌ಗೆ ಲಭ್ಯವಿದೆ ಹಾಗೂ ಇನ್‌ಸ್ಟಾಗ್ರಾಂ ಜೊತೆಗೆ ಲಿಂಕ್‌ ಆಗಿದೆ. ಈ ಆ್ಯಪ್‌ನ ಡ್ಯಾಶ್‌ಬೋರ್ಡ್‌ ಟ್ವಿಟ್ಟರ್‌ ರೀತಿಯೇ ಇದ್ದು ಥ್ರೆಡ್ಸ್‌ ಅನ್ನು “ಪಠ್ಯ ಆಧಾರಿತ ಸಂಭಾಷಣೆ ಆ್ಯಪ್”‌ ಎಂದು ಮೆಟಾ ವರ್ಣಿಸಿದೆ.

ಮೆಟಾ ಮುಖ್ಯಸ್ಥ ಮಾರ್ಕ್‌ ಝುಕರ್‌ಬರ್ಗ್‌ ಹಾಗೂ ಟ್ವಿಟ್ಟರ್‌ ಮಾಲೀಕ ಎಲಾನ್‌ ಮಸ್ಕ್‌ ಅವರ ನಡುವಿನ ವೃತ್ತಿಪರ ವೈಷಮ್ಯದ ಇನ್ನೊಂದು ಹೊಸ ಅಧ್ಯಾಯವೆಂಬಂತೆ ಈ ಹೊಸ ಆ್ಯಪ್‌ ಆರಂಭಗೊಳ್ಳುತ್ತಿದೆ. ಮೆಟಾದ ಥ್ರೆಡ್ಸ್‌ ಒಂದು ಉಚಿತ ಆ್ಯಪ್‌ ಆಗಲಿದೆ ಎಂಬ ಸುಳಿವು ಇದ್ದು ಒಬ್ಬ ಬಳಕೆದಾರ ಮಾಡಬಹುದಾದ ಪೋಸ್ಟ್‌ಗಳಿಗೆ ಮಿತಿ ಇರುವುದಿಲ್ಲ.

ಸಮುದಾಯಗಳು ಇಂದಿಗೆ ಪ್ರಸ್ತುತವಾಗಿರುವ ವಿಷಯಗಳಿಂದ ಹಿಡಿದು ನಾಳೆ ಟ್ರೆಂಡಿಂಗ್‌ ಆಗಬಹುದಾದ ವಿಚಾರಗಳ ಕುರಿತು ಚರ್ಚಿಸುವ ತಾಣ ಇದಾಗಿದೆ ಎಂದು ಆ್ಯಪ್‌ ಸ್ಟೋರ್‌ ವಿವರಣೆ ಹೇಳಿದೆ. ಟ್ವಿಟ್ಟರ್‌ ಅನ್ನು ಹೋಲುವ ಹಲವು ಆ್ಯಪ್‌ಗಳು ಹೊರಬಂದಿವೆಯಾದರೂ ಥ್ರೆಡ್ಸ್‌ ಮಾತ್ರ ಟ್ವಿಟ್ಟರ್‌ಗೆ ಪ್ರಬಲ ಸವಾಲೊಡ್ಡುವ ನಿರೀಕ್ಷೆಯಿದೆ.

ಥ್ರೆಡ್ಸ್‌ ಆ್ಯಪ್‌ ಇನ್‌ಸ್ಟಾಗ್ರಾಂ ಪ್ಲಾಟ್‌ಫಾರ್ಮ್‌ ಭಾಗವಾಗಲಿರುವುದರಿಂದ ಲಕ್ಷಾಂತರ ಖಾತೆಗಳಿಗೆ ಲಿಂಕ್‌ ಆಗಲಿದೆ. ಟ್ವಿಟ್ಟರ್‌ ಬಳಕೆಯಿಂದ ಬೇಸತ್ತಿರುವ ಹಲವು ಬಳಕೆದಾರರನ್ನು ಥ್ರೆಡ್‌ನತ್ತ ಸೆಳೆಯುವ ವಿಶ್ವಾಸ ಮಾರ್ಕ್‌ ಝುಕೆರ್‌ಬರ್ಗ್‌ ಅವರಿಗಿದೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News