×
Ad

ಟೆಲಿಪತಿಯಂತೆಯೇ ಮಾತು ಗ್ರಹಿಸುವ ಶ್ರವಣ ಸಾಧನವನ್ನು ಪತ್ತೆ ಮಾಡಿದ ಎಂಐಟಿ ಸಂಶೋಧಕರು

Update: 2026-03-11 12:43 IST

Screengrab: youtube/MIT Media Lab

ಸಾಧನವನ್ನು ಧರಿಸಿದರೆ ಬಾಯಿಯಿಂದ ಒಂದೂ ಧ್ವನಿಯನ್ನು ಹೊರಡಿಸದೆ ಬರೀ ಬಾಯಿ ಅಲುಗಾಡಿಸಿದರೆ ಸಾಕು ಶ್ರವಣ ಸಾಧನ ಅದನ್ನು ಗ್ರಹಿಸಿ ಮುಂದಿಟ್ಟುಬಿಡುತ್ತದೆ.


ಟೆಲಿಪತಿಯಂತೆಯೇ ಸಂವಹನ ಸಾಧ್ಯವಾಗುವ ಸಾಧನವೊಂದನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಈ ಸಾಧನವನ್ನು ಧರಿಸಿದರೆ ನೀವು ಬಾಯಿಯಿಂದ ಒಂದೂ ಧ್ವನಿಯನ್ನು ಹೊರಡಿಸದೆ ಬರೀ ಬಾಯಿ ಅಲುಗಾಡಿಸಿದರೆ ಸಾಕು ಶ್ರವಣ ಸಾಧನ ಅದನ್ನು ಗ್ರಹಿಸಿ ಮುಂದಿಟ್ಟುಬಿಡುತ್ತದೆ. ಮಸ್ಸಾಚ್ಯುಟಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಐಟಿ ಮೀಡಿಯಾ ಲ್ಯಾಬ್ ನಲ್ಲಿ ಬೆಳೆದ ಕಂಪನಿಯಾದ ‘AlterEgo’ ಈ ಧರಿಸುವಂತಹ ಹೊಸ ಸಾಧನವನ್ನು ಕಂಡುಹಿಡಿದಿದೆ.

ಕಂಪನಿಯ ಸಂಶೋಧಕರು ಇತ್ತೀಚೆಗೆ ಈ ಹೊಸ ಧರಿಸುವ ಸಾಧನವನ್ನು ಪ್ರದರ್ಶಿಸಿದ್ದು, “ಮೌನ ಭಾಷಣ”ವು ಆಂತರಿಕ ಚಿಂತನೆಗಳನ್ನು ನಿರೂಪಿಸಲು ಸಾಧ್ಯವಾಗಿದೆ ಮತ್ತು ಮಾತನಾಡದೆಯೇ ಸಂವಹನ ಮಾಡಲು ಸಾಧ್ಯವಾಗಿಸಿದೆ.

‘ಸೈಲೆಂಟ್ ಸೆನ್ಸ್” (ಮೌನ ಜ್ಞಾನ) ಎಂದು ಕರೆಯಲಾಗಿರುವ AlterEgo ಕಂಪನಿಯ ಸಾಧನವು ಅನೇಕ ರೀತಿಯ ಭಾಷಣಗಳನ್ನು ಗುರುತಿಸಲು ಯಶಸ್ವಿಯಾಗಿದೆ. ಸಾಮಾನ್ಯವಾಗಿ ಮಾತನಾಡುವುದರಿಂದ ತೊಡಗಿ ಮೌನವಾಗಿ ಶಬ್ದಗಳನ್ನು ಹೇಳಲು ಬಾಯಿ ತೆರೆಯುವುದು ಮತ್ತು ಕೆಲವರು ಮಾತನಾಡಲು ಬಯಸಿದಾಗ ಆಗುವ ಸಣ್ಣ ಸ್ನಾಯುಗಳ ಚಲನೆಯನ್ನೂ ಸಾಧನ ಮಾಡಿದೆ.

AlterEgo ಕಂಪನಿ ತಮ್ಮ ವೆಬ್ಸೈಟ್ನಲ್ಲಿ ಈ ಸಾಧನಗಳನ್ನು ನಾನ್- ಇನ್ವೇಸಿವ್ (ಅತಿಕ್ರಮಣಶೀಲವಲ್ಲ) ಎಂದು ವಿವರಿಸಿದೆ. “ಮಾನವರು ಬಾಯಿಯಿಂದ ಒಂದು ಶಬ್ದವನ್ನೂ ಹೊರಡಿಸದೆ ಅಥವಾ ತಮ್ಮ ಬಾಯಿಯನ್ನು ತೆರೆಯದೆಯೇ ಮಿಷಿನ್ಗಳು, AI ಅಸಿಸ್ಟಂಟ್ಗಳು, ಸರ್ವಿಸ್ಗಳು ಮತ್ತು ಇತರರೊಂದಿಗೆ ಸ್ವಾಭಾವಿಕವಾಗಿ ಮಾತನಾಡಲು ಸಾಧ್ಯವಾಗುವಂತಹ ಬಾಹ್ಯ ನರಮಂಡಲದ ಇಂಟರ್ಫೇಸ್” ಎಂದು ತಮ್ಮ ಸಾಧನವನ್ನು ಕಂಪನಿ ವಿವರಿಸಿದೆ.

ಹೀಗಾಗಿ, ಈ ಮೊದಲು ಮಾನವರು ಮಾತನಾಡಬೇಕಾಗಿ ಬಂದಿರುವ ಕೆಲಸಗಳಾದ ಸಂಭಾಷಣೆ, ಲೈವ್ ಅನುವಾದ ಮತ್ತು ಡಿಜಿಟಲ್ ಸಾಧನಗಳನ್ನು ನಿಯಂತ್ರಿಸುವುದನ್ನು ಇದೀಗ ಒಂದು ಶಬ್ದವನ್ನೂ ಬಾಯಿ ಬಿಡದೆಯೇ ಪೂರ್ಣಗೊಳಿಸಬಹುದಾಗಿದೆ.

ಮೌನವಾಗಿ ಎಲ್ಲವನ್ನೂ ನಿಯಂತ್ರಿಸುವ ಸಾಮರ್ಥ್ಯದಿಂದ ಬಹಳ ಗೌಪ್ಯತೆಯ ಲಾಭವಿದೆ. ಸಾರ್ವಜನಿಕವಾಗಿ ಜನರು ಸೂಕ್ಷ್ಮವಾದ ಸಂಭಾಷಣೆಯನ್ನು ಹೇಳುವ ಅಗತ್ಯವಿಲ್ಲ. ಆದರೆ ಸಾಧನವು ಗೌಪ್ಯ ಚಿಂತನೆಗಳನ್ನು ಹೊರಗಿಡುವ ಕಾರಣ ಖಾಸಗಿ ಹಕ್ಕುಗಳ ಕಳವಳವೂ ಮೂಡುತ್ತದೆ.

ಆಲ್ಟರ್ಈಗೋ ಪ್ರಕಾರ ಪ್ರಾಥಮಿಕವಾಗಿ ಮಾತು ಬಾರದವರಿಗೆ ಮತ್ತು ಅಮಯೋಟ್ರೋಫಿಕ್ ಲ್ಯಾಟರಲ್ ಸ್ಕ್ಲೆರೋಸಿಸ್ (ALS) ಮತ್ತು ಮಲ್ಟಿಪಲ್ ಸ್ಕ್ಲೆರೋಸಿಸ್ (MS) ಇರುವವರಿಗೆ ನೆರವು ನೀಡುವುದು ಸಾಧನದ ಪ್ರಮುಖ ಉದ್ದೇಶವಾಗಿದೆ. ಆದರೆ ಮಾನವರು ಮತ್ತು ಕಂಪ್ಯೂಟರ್ ನಡುವಿನ ಅಂತರವನ್ನು ಕಡಿಮೆ ಮಾಡಲು ಕೂಡ ಸಾಧನ ನೆರವಾಗಲಿದೆ.

AlterEgo ಕಂಪನಿ ಹೇಳಿರುವ ಪ್ರಕಾರ, ಆಂತರಿಕ ಮಾತುಗಳ ಅಭಿವ್ಯಕ್ತಿಗಳು ಸ್ವಯಂಪ್ರೇರಣೆಯಿಂದ ಮತ್ತು ನರವೈಜ್ಞಾನಿಕವಾಗಿ ಸಕ್ರಿಯಗೊಂಡಾಗ ಬಾಹ್ಯ ನರಗಳ ಸಂಕೇತಗಳನ್ನು ಧರಿಸುವ ಸಾಧನವು ಸೆರೆಹಿಡಿಯುತ್ತದೆ. ಇದರಿಂದಾಗಿ ಧರಿಸುವ ಸಾಧನವು ಕಂಪ್ಯೂಟಿಂಗ್ ಸಾಧನದಿಂದ ಮತ್ತೊಬ್ಬ ವ್ಯಕ್ತಿಗೆ ಯಾವುದೇ ದೃಶ್ಯಗೋಚರ ಕ್ರಿಯೆಯಿಲ್ಲದೆ ಮಾಹಿತಿಯನ್ನು ರವಾನಿಸಲು ಮತ್ತು ಸ್ವೀಕರಿಸಲು ಸಹಾಯ ಮಾಡುತ್ತದೆ.

ಆದರೆ ಇದಕ್ಕೆ ಮನಸ್ಸನ್ನು ಓದಲು ಬರುವುದಿಲ್ಲ. ಹೀಗಾಗಿ ವ್ಯಕ್ತಿಯು ಆಲ್ಟರ್ಈಗೊ ಧರಿಸುವ ಸಾಧನ ಧರಿಸಿದಾಗ ಆಲೋಚಿಸುವುದು ಅಥವಾ ಮನಸ್ಸಿನಲ್ಲೇ ಮಂಡಿಗೆ ತಿಂದರೆ ಅದನ್ನು ಸಾಧನ ಗ್ರಹಿಸುವುದಿಲ್ಲ. ಅವರು ಅದನ್ನು ಹೇಳಲು ಬಾಯಿ ತೆರೆದರೆ ಅಥವಾ ಸಣ್ಣ ಬಾಯಿ ಸಂಜ್ಞೆಯನ್ನು ಮಾಡಿದರೆ ಮಾತ್ರ ಪತ್ತೆ ಮಾಡುತ್ತದೆ.

ಸದ್ಯದ ಮಟ್ಟಿಗೆ ಸಾಧನವನ್ನು ಮಾರಾಟಕ್ಕೆ ಇಡಲಾಗಿಲ್ಲ. ಮಾರುಕಟ್ಟೆಗೆ ತರುವ ಮೊದಲು ಸಾಧನದ ಮೇಲೆ ಇನ್ನೂ ಅನೇಕ ಪರೀಕ್ಷೆಗಳನ್ನು ನಡೆಸಬೇಕಾಗುತ್ತದೆ.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News