ಆ್ಯಂಡ್ರಾಯ್ಡ್ ನಲ್ಲಿ ವಾಟ್ಸಪ್ ಎಚ್‍ಡಿ ವೀಡಿಯೋ ಶೇರಿಂಗ್ ಸೌಲಭ್ಯಕ್ಕೆ ಚಾಲನೆ

Update: 2023-08-26 02:57 GMT

ಮೆಟಾ ಮಾಲೀಕತ್ವದ ಮೆಸೇಜಿಂಗ್ ಪ್ಲಾಟ್‍ ಫಾರಂ ವಾಟ್ಸಪ್, ಅಧಿಕ ರೆಸೊಲ್ಯೂಶನ್ ಫೋಟೊಗಳನ್ನು ಕಳುಹಿಸುವ ವ್ಯವಸ್ಥೆಗೆ ಚಾಲನೆ ನೀಡಿರುವ ಮರುದಿನವೇ ಎಚ್‍ಡಿ ವಿಡಿಯೊ ಹಂಚಿಕೊಳ್ಳುವ ಸೌಲಭ್ಯವನ್ನೂ ಆ್ಯಂಡ್ರಾಯ್ಡ್ ಬಳಕೆದಾರರಿಗೆ ಕಲ್ಪಿಸಿದೆ.

ಇದುವರೆಗೂ ವಾಟ್ಸಪ್ ಮೂಲಕ ಕಳುಹಿಸುವ ಎಲ್ಲ ವೀಡಿಯೋಗಳ ಗಾತ್ರವನ್ನು ಕುಗ್ಗಿಸಿ ಕಳುಹಿಸಲಾಗುತ್ತಿತ್ತು ಹಾಗೂ ಇದನ್ನು ಸ್ವೀಕರಿಸುವವರು ಕಡಿಮೆ ರೆಸೊಲ್ಯೂಶನ್ ವೀಡಿಯೋಗಳನ್ನು ಪಡೆಯುತ್ತಿದ್ದರು. ಇದೀಗ ಹೈರೆಸೊಲ್ಯೂಶನ್ ವೀಡಿಯೋಗಳನ್ನು ಕಳುಹಿಸುವ ಆಯ್ಕೆಯೂ ಬಳಕೆದಾರರಿಗೆ ಲಭ್ಯವಾಗಲಿದೆ.

ವಾಟ್ಸಪ್ ಫಾರ್ ಆ್ಯಂಡ್ರಾಯ್ಡ್ 2.23.17.74 ಅಪ್‍ಡೇಟ್ ಗುರುವಾರದಿಂದ ಬಳಕೆದಾರರಿಗೆ ಲಭ್ಯವಿದೆ. ಇದೀಗ ಬಳಕೆದಾರರಿಗೆ ಮೊಬೈಲ್ ಸ್ಕ್ರೀನ್ ಮೇಲ್ಭಾಗದಲ್ಲಿ ಎಚ್‍ಡಿ ಐಕಾನ್ ಕಾಣಿಸಿಕೊಳ್ಳಲಿದ್ದು, ಇದನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ಬಳಕೆದಾರರು ವೀಡಿಯೋಗಳನ್ನು ಅತ್ಯಧಿಕ ರೆಸೊಲ್ಯೂಶನ್‍ನಲ್ಲಿ ಕಳುಹಿಸಲು ಸಾಧ್ಯವಾಗಲಿದೆ. ಈ ಹೊಸ ವ್ಯವಸ್ಥೆಯಿಂದಾಗಿ ವಾಟ್ಸಪ್ ಬಳಕೆದಾರರು 480 ಪಿಕ್ಸೆಲ್ಸ್ ಬದಲಾಗಿ 720 ಪಿಕ್ಸೆಲ್ ಗುಣಮಟ್ಟದ ವೀಡಿಯೋಗಳನ್ನು ಕಳುಹಿಸಬಹುದಾಗಿದೆ.

ಎಚ್‍ಡಿ ವೀಡಿಯೋ ಕಳುಹಿಸುವುದು ಹೇಗೆ?

1. ವಾಟ್ಸಪ್‍ ನಲ್ಲಿ ಚಾಟ್ ಓಪನ್ ಮಾಡಿ ಮತ್ತು ಗ್ಯಾಲರಿಯಲ್ಲಿ ಅಟಾಚ್‍ ಮೆಂಟ್ ಐಕಾನ್ ಟ್ಯಾಪ್ ಮಾಡಿ

2. ಇದರ ಪ್ರಿವ್ಯೂ ನೋಡಲು ನೀವು ಕಳುಹಿಸಬೇಕಾಗಿರುವ ವೀಡಿಯೋವನ್ನು ಆಯ್ಕೆ ಮಾಡಿ

3. ಸ್ಕ್ರೀನ್ ಮೇಲ್ಭಾಗದಲ್ಲಿ ಸ್ಟಿಕ್ಕರ್, ಸಂದೇಶ ಹಾಗೂ ಡ್ರಾಯಿಂಗ್ ಐಕಾನ್‍ನ ಎಡಭಾಗದಲ್ಲಿ ಎಚ್‍ಡಿ ಐಕಾನ್ ಕಾಣಿಸುತ್ತದೆ.

4. ಎಚ್‍ಡಿ ಕ್ವಾಲಿಟಿ ಆಯ್ಕೆ ಮಾಡಿ ಹಾಗೂ ನಿಮ್ಮ ಫೈಲ್ ಗಾತ್ರ ಹೆಚ್ಚುವುದನ್ನು ಗಮನಿಸಿ. ಬಳಿಕ ಡನ್ ಎನ್ನುವುದನ್ನು ಟ್ಯಾಪ್ ಮಾಡಿ.

5. ವೀಡಿಯೋದಲ್ಲಿ ಯಾವುದೇ ಬದಲಾವಣೆ ಅಥವಾ ಎಡಿಟ್ ಮಾಡಿದ ಬಳಿಕ ಬಲಬದಿಯ ತಳಭಾಗದಲ್ಲಿ ಸೆಂಡ್ ಬಟನ್ ಟ್ಯಾಪ್ ಮಾಡಿ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News