×
Ad

ಬೆಂಗಳೂರಿನ ರಸ್ತೆಯಲ್ಲಿವೆ 1 ಕೋಟಿ ಖಾಸಗಿ ವಾಹನಗಳು!

Update: 2023-10-23 19:17 IST

PHOTO : PTI

ಬೆಂಗಳೂರು: ದಸರಾ-ದೀಪಾವಳಿ ಹಬ್ಬದ ಋತು ಮುಗಿಯುವ ಹೊತ್ತಿಗೆ ಬೆಂಗಳೂರಿನಲ್ಲಿ ನೋಂದಣಿಯಾಗಿರುವ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ಗಡಿ ಮುಟ್ಟಲಿದೆ ಎಂದು TimesofIndia.com ವರದಿ ಮಾಡಿದೆ. 

ಈಗ ನಗರದಲ್ಲಿ 99.8 ಲಕ್ಷ ಖಾಸಗಿ ವಾಹನಗಳಿದೆ, ಇವುಗಳಲ್ಲಿ 75.6 ಲಕ್ಷ ದ್ವಿಚಕ್ರ ವಾಹನಗಳೇ ಇವೆ ಎಂದು ವರದಿ ಹೇಳಿದೆ. 23.1 ಲಕ್ಷ ಕಾರುಗಳು ವೈಯಕ್ತಿಕ ವಾಹನಗಳಾಗಿ ನೋಂದಣಿಯಾಗಿದ್ದು, ಕೇವಲ ಈ ವರ್ಷದ ಸೆಪ್ಟೆಂಬರ್‌ ತಿಂಗಳಲ್ಲಿ ಮಾತ್ರ ಪ್ರತಿದಿನ ಸರಾಸರಿ 1,300 ಹೊಸ ದ್ವಿಚಕ್ರ ಹಾಗೂ 409 ಕಾರುಗಳಂತೆ ನೋಂದಣಿಯಾಗಿವೆ. 
ಅಕ್ಟೋಬರ್ ಮತ್ತು ನವೆಂಬರ್ ಹಬ್ಬದ ತಿಂಗಳುಗಳಾಗಿರುವುದರಿಂದ ಸಾಮಾನ್ಯವಾಗಿ ಹೊಸ ವಾಹನಗಳ ನೋಂದಣಿಯಲ್ಲಿ ಗಣನೀಯ ಏರಿಕೆ ಕಾಣಲಿದ್ದು, ಶೀಘ್ರದಲ್ಲೇ ಕೇವಲ ಖಾಸಗಿ ವಾಹನಗಳ ಸಂಖ್ಯೆ ಒಂದು ಕೋಟಿ ಗಡಿ ದಾಟಲಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿರುವುದಾಗಿ ವರದಿ ತಿಳಿಸಿದೆ. ನಗರದಲ್ಲಿ ನೋಂದಣಿಯಾದ ವಾಹನಗಳ ಸಂಖ್ಯೆ 2012-13 ರಲ್ಲಿ 55.2 ಲಕ್ಷ ಇದ್ದರೆ, ಈ ವರ್ಷ ಸೆಪ್ಟೆಂಬರ್ 30 ಕ್ಕಾಗುವಾಗ ಈ ಸಂಖ್ಯೆಯಲ್ಲಿ ದ್ವಿಗುಣವಾಗಿದ್ದು, ಈ ವರ್ಷದ ಸೆಪ್ಟೆಂಬರ್ 30 ರ ಹೊತ್ತಿಗೆ, ಬೆಂಗಳೂರಿನಲ್ಲಿ ನೋಂದಣಿಯಾದ ಒಟ್ಟಾರೆ ವಾಹನಗಳ ಸಂಖ್ಯೆ 1.1 ಕೋಟಿ ದಾಟಿದೆ
Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News