×
Ad

ತನಿಖೆಗೆ ಅಸಹಕಾರ: ಟಿಎಂಸಿ ಮುಖಂಡ ಶಹಜಹಾನ್ ಬಂಧನ

Update: 2024-03-31 09:16 IST

Photo:TOI

ಕೊಲ್ಕತ್ತಾ: ಹಣ ದುರುಪಯೋಗ ಮತ್ತು ಭೂ ಕಬಳಿಕೆ ಹಗರಣಗಳಲ್ಲಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಆರೋಪದಲ್ಲಿ ಕಾನೂನು ಜಾರಿ ನಿರ್ದೇಶನಾಲಯ ಟಿಎಂಸಿ ಮುಖಂಡ ಶೇಖ್ ಶಹಜಹಾನ್ ಅವರನ್ನು ಬಂಧಿಸಿದೆ. ಶನಿವಾರ ಮೂರು ಗಂಟೆಗಳ ಕಾಲ ಈಡಿ ವಿಚಾರಣೆಗೆ ಗುರಿಪಡಿಸಿದೆ.

ಸಂದೇಶ್ ಖಾಲಿಯ ಪ್ರಭಾವಿ ವಯಕ್ತಿಯಾಗಿರುವ ಶಹಜಹಾನ್ ಪ್ರಸ್ತುತ ಬಸ್ರಿಹಾತ್ ಜೈಲಿನಲ್ಲಿದ್ದಾರೆ.

ಪಡಿತರ ಹಗರಣದಲ್ಲಿ ಶಹಜಹಾನ್ ಅವರ 12 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಈಡಿ ನ್ಯಾಯಾಲಯದಲ್ಲಿ ಹೇಳಿದೆ. ಶಹಜಹಾನ್ 15-16 ಭೂಕಬಳಿಕೆ ಆರೋಪಗಳನ್ನೂ ಎದುರಿಸುತ್ತಿದ್ದು, ಇದರಿಂದ ಬಂದ ಹಣವನ್ನು ಸಂದೇಶ್ ಖಾಲಿಯಲ್ಲಿ ಅಕ್ರಮ ಫಿಶ್ ಫಾರ್ಮ್ ಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಇ.ಡಿ. ಆಪಾದಿಸಿದೆ.

ಅಕ್ರಮವಾಗಿ ಗಳಿಸಿದ ಬಹುಪಾಲು ಆದಾಯವನ್ನು ಹೊರದೇಶಗಳಲ್ಲಿ ಇವರು ಹೂಡಿಕೆ ಮಾಡಿದ್ದಾರೆ ಎನ್ನುವುದು ನಿರ್ದೇಶನಾಲಯದ ಆರೋಪವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News