ಆದಿತ್ಯ ಠಾಕ್ರೆ ಅವರ ಆಪ್ತ ರಾಹುಲ್ ಕನಾಲ್ ನಾಳೆ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಗೆ ಸೇರ್ಪಡೆ
Photo: Twitter, ಆದಿತ್ಯ ಠಾಕ್ರೆ
ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ (ಯುಬಿಟಿ)ಗೆ ಮತ್ತೊಂದು ಹಿನ್ನಡೆಯಾಗಿದ್ದು, ಆದಿತ್ಯ ಠಾಕ್ರೆ ಅವರ ನಿಕಟವರ್ತಿ ರಾಹುಲ್ ಕನಾಲ್ ರವಿವಾರ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಸೇರಲಿದ್ದಾರೆ.
ಮುಂಬೈ ನಗರಪಾಲಿಕೆ ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಅಥವಾ ಬಿಎಂಸಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ಆದಿತ್ಯ ಠಾಕ್ರೆ ಪ್ರತಿಭಟನಾ ಮೆರವಣಿಗೆಯನ್ನು ಮುನ್ನಡೆಸುತ್ತಿರುವ ದಿನದಂದೇ ಕನಾಲ್ ಅವರು ಪಕ್ಷ ನಿಷ್ಠೆ ಬದಲಿಸಲಿದ್ದಾರೆ.
ಆದಿತ್ಯ ಠಾಕ್ರೆ ನೇತೃತ್ವದ ಶಿವಸೇನೆಯ ಯುವ ಘಟಕವಾದ ಯುವಸೇನೆಯ ಅತ್ಯಂತ ಸಕ್ರಿಯ ಸದಸ್ಯರಾಗಿದ್ದ ಕನಾಲ್ ಅವರು ಯುವ ಸೇನೆಯ ಕಾರ್ಯಚಟುವಟಿಕೆಯಿಂದ ಅಸಮಾಧಾನಗೊಂಡಿದ್ದರಿಂದ ಈಗಾಗಲೇ ಅದರ ಕೋರ್ ಕಮಿಟಿಯನ್ನು ತೊರೆದಿದ್ದಾರೆ.
ಕನಾಲ್ ಅವರು ಸೇರಿದಂತೆ ಬಾಂದ್ರಾ ಪಶ್ಚಿಮದಿಂದ ಯುವಸೇನೆಯ ಎಲ್ಲಾ ಪದಾಧಿಕಾರಿಗಳನ್ನು ಶಿವಸೇನೆ ಅಮಾನತುಗೊಳಿಸಿದ ನಂತರ ನಿನ್ನೆ ಟ್ವಿಟರ್ನಲ್ಲಿ ತಮ್ಮ ನಿರಾಶೆಯನ್ನು ವ್ಯಕ್ತಪಡಿಸಿದ್ದ ಕನಾಲ್ ಅತ್ಯಂತ "ದುಃಖವಾಗುತ್ತಿದೆ!!!" ಎಂದು ಅವರು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ, ಕನಾಲ್ ಅವರು ಶಿರಡಿಯಲ್ಲಿ ಸಾಯಿಬಾಬಾರ ದೇವಸ್ಥಾನದ ಟ್ರಸ್ಟ್ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್ (SSST) ಯ ಟ್ರಸ್ಟಿಯಾಗಿದ್ದರು. ಅವರು 2017 ರಲ್ಲಿ BMC ಯ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದರು