×
Ad

ಬಂಟ್ವಾಳ: ಬಿ.ಜನಾರ್ದನ ಪೂಜಾರಿ, ಬಿ. ರಮಾನಾಥ ರೈ ಮನೆಗೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ

Update: 2023-06-24 14:38 IST

ಬಂಟ್ವಾಳ : ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಅವರ ಮನೆಗೆ ಶುಕ್ರವಾರ ಭೇಟಿ ನೀಡಿದರು.

ಈ ಸಂದರ್ಭ ಪೂಜಾರಿ ಅವರು ದಿವಂಗತ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದಾಗ ತಾನು ಹಾಗೂ ಮಾಜಿ ಸಿ.ಎಂ. ಗುಂಡೂರಾವ್ ಜತೆಯಾಗಿ ಕೆಲಸ ಮಾಡಿದ್ದೆವು ಎಂದು ನೆನಪಿಸಿಕೊಂಡರು. ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡುವಂತೆ ದಿನೇಶ್ ಗುಂಡೂರಾವ್ ಅವರಿಗೆ ಪೂಜಾರಿಯವರು ಸಲಹೆ ನೀಡಿದರು.

ನಿಮ್ಮಂತವರ ಮಾರ್ಗದರ್ಶನ, ಸಲಹೆ ಪಡೆಯುವುದೇ ನಮ್ಮ ಸೌಭಾಗ್ಯ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

ಈ ಸಂದರ್ಭ ಮಾಜಿ ಸಚಿವ ರಮಾನಾಥ ರೈ ಹಾಗೂ ಧನಭಾಗ್ಯ ಆರ್. ರೈ ತಮ್ಮ ನಿವಾಸಕ್ಕೆ ಬರಮಾಡಿಕೊಂಡರು.

 

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ಕುಮಾರ್, ಪಿಯೂಸ್ ಎಲ್.ರೋಡ್ರಿಗಸ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಪದ್ಮಶೇಖರ ಜೈನ್, ಪದ್ಮರಾಜ್ ಆರ್, ಮಿಥುನ್ ರೈ, ಬೇಬಿ ಕುಂದರ್, ಸುದೀಪ್ಕುಮಾರ್ ಶೆಟ್ಟಿ, ಲುಕ್ಮಾನ್ ಬಂಟ್ವಾಳ, ಸುರೇಶ್ ಜೋರ, ಸುದರ್ಶನ್ ಜೈನ್, ಮಾಯಿಲಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ, ಬಿ.ಎಂ. ಅಬ್ಬಾಸ್ ಆಲಿ, ಜನಾರ್ದನ ಚಂಡ್ತಿಮಾರ್, ವಾಸು ಪೂಜಾರಿ, ಕರುಣಾಕರ ಶೆಟ್ಟಿ, ನವೀನ್ ಡಿ'ಸೋಜ, ಎ.ಸಿ. ವಿನಯರಾಜ್, ಪ್ರವೀಣ್ಚಂದ್ರ ಶೆಟ್ಟಿ, ಅನಿಲ್ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News