×
Ad

ಶಾಂತಿ ಕಾಪಾಡುವಂತೆ ಬೆಂಬಲಿಗರಲ್ಲಿ ಮನವಿ ಮಾಡಿದ ಭೀಮ್ ಸೇನಾ ಮುಖ್ಯಸ್ಥ ಚಂದ್ರ ಶೇಖರ್ ಆಝಾದ್

Update: 2023-06-29 12:55 IST

ಫೋಟೋ: Twitter@ ANI

ಸಹಾರನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್ಪುರ ಜಿಲ್ಲೆಯಲ್ಲಿ ಬಂಧೂಕುದಾರರು ಗುಂಡು ಹಾರಿಸಿದ ನಂತರ ಆಝಾದ್ ಸಮಾಜ್ ಪಕ್ಷದ ನಾಯಕ ಮತ್ತು ಭೀಮ್ ಸೇನಾ ಮುಖ್ಯಸ್ಥ ಚಂದ್ರ ಶೇಖರ್ ಆಝಾದ್ ಅವರು ತಮ್ಮ ಸ್ನೇಹಿತರು ಹಾಗೂ ಬೆಂಬಲಿಗರಿಗೆ ಶಾಂತಿಯನ್ನು ಕಾಪಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ.

"ಅಂತಹ ಹಠಾತ್ ದಾಳಿಯನ್ನು ನಾನು ನಿರೀಕ್ಷಿಸಿರಲಿಲ್ಲ. ಶಾಂತಿಯನ್ನು ಕಾಪಾಡಿಕೊಳ್ಳಲು ನನ್ನ ಸ್ನೇಹಿತರು, ಬೆಂಬಲಿಗರು ಹಾಗೂ ದೇಶಾದ್ಯಂತದ ಕಾರ್ಯಕರ್ತರಿಗೆ ಮನವಿ ಮಾಡಲು ನಾನು ಬಯಸುತ್ತೇನೆ. ನಾವು ನಮ್ಮ ಹೋರಾಟವನ್ನು ಸಾಂವಿಧಾನಿಕವಾಗಿ ಮುಂದುವರಿಸುತ್ತೇವೆ. ಜನರ ಕೋಟ್ಯಂತರ ಜನರ ಪ್ರೀತಿ ಹಾಗೂ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ" ಎಂದು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವ ಆಝಾದ್ ಎಎನ್ಐಗೆ ತಿಳಿಸಿದರು.

ಚಂದ್ರ ಶೇಖರ್ ಆಝಾದ್ ಈಗ ಉತ್ತಮವಾಗಿದ್ದಾರೆ ಹಾಗೂ ಗುರುವಾರ ತಪಾಸಣೆಯ ನಂತರ ಬಿಡುಗಡೆ ಮಾಡಲಾಗುವುದು. ತನಿಖೆ ನಡೆಯುತ್ತಿದೆ ಮತ್ತು ಗುಂಡಿನ ದಾಳಿಯ ಹಿಂದಿನ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು  ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News