×
Ad

ಬಿಜೆಪಿಯವರು ಎಡಬಿಡಂಗಿಗಳು: ಸಚಿವ ರಾಮಲಿಂಗಾ ರೆಡ್ಡಿ

Update: 2023-06-15 12:49 IST
ಫೋಟೋ: (facebook.com/ರಾಮಲಿಂಗಾರೆಡ್ಡಿಒಫಿಷಿಯಲ್)

ಬೆಂಗಳೂರು: ಬಿಜೆಪಿಯವರು ಎಡಬಿಡಂಗಿಗಳು ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ಗೊತ್ತಿರುವುದಿಲ್ಲ. ಸ್ವತಃ ತಮ್ಮ ಪಕ್ಷದವರೇ ಸೋಲಿಸಿದ್ದಾರೆ ಎಂದು ಸೋಲಿನ ಬಗ್ಗೆ ಹತಾಶರಾಗಿದ್ದಾರೆ ಎಂದು ಹೇಳಿದರು.

ಪ್ರತಾಪ್ ಸಿಂಹ ಏನು ಮಾತನಾಡುತ್ತಿದ್ದಾರೆ ಎಂದು ಅವರಿಗೇ ಅರ್ಥವಾಗುತ್ತಿಲ್ಲ. ಪಕ್ಷದ ಮುಖಂಡು ವಿಚಾರಣೆ ಮಾಡಿದರೆ ಒಳ್ಳೆಯದು ಎಂದುಹೇಳಿದರು.

ಕೇಂದ್ರ ಸರಕಾರ ಬಿಜೆಪಿಯವರದ್ದೇನೂ ಅಲ್ಲ, ಜನರದ್ದು. ಅವರು ಅಧಿಕಾರದಲ್ಲಿದ್ದಾರಷ್ಟೇ. ನಾವು ಮಾಡುವ ಕಾರ್ಯಕ್ರಮಗಳಿಗೆ ಕೇಂದ್ರ ಸರಕಾರದ ಅನುಮತಿ ಕೇಳಬೇಕಾ ಎಂದು ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News