×
Ad

ಟೈಮ್ಸ್ ನೌ ಸಂಸ್ಥೆಯಿಂದ ನಿರ್ಗಮಿಸಿದ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್

Update: 2023-06-20 21:58 IST

Photo: @RShivshankar | Twitter

ಹೊಸದಿಲ್ಲಿ: ಟೈಮ್ಸ್ ನೌ ವಾಹಿನಿಯ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ತಮ್ಮ ಸ್ಥಾನದಿಂದ ನಿರ್ಗಮಿಸಿದ್ದು, ಟೈಮ್ಸ್ ನೌ ಜೊತೆಗಿನ ತಮ್ಮ ಏಳು ವರ್ಷದ ಪಯಣಕ್ಕೆ ಕೊನೆ ಹಾಡಿದ್ದಾರೆ‌.

“ಟೈಮ್ಸ್ ನೌ ಪ್ರಧಾನ ಸಂಪಾದಕ ರಾಹುಲ್ ಶಿವಶಂಕರ್ ಅವರು ನೆಟ್‌ವರ್ಕ್‌ನಿಂದ ಬೇರೆಯಾಗಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಚಾನೆಲ್‌ನ ಕಾರ್ಯಚಟುವಟಿಕೆಗಳು ಸಮೂಹ ಸಂಪಾದಕರಾದ ನಾವಿಕ ಕುಮಾರ್ ಅವರ ಉಸ್ತುವಾರಿಯಲ್ಲಿರುತ್ತವೆ" ಎಂದು ಸಂಸ್ಥೆಯ ಉದ್ಯೋಗಿಗಳಿಗೆ ಆಂತರಿಕ ಸಂದೇಶ ರವಾನೆಯಾಗಿದೆ ಎಂದು newslaundry.com ವರದಿ ಮಾಡಿದೆ.

ನ್ಯೂಸ್‌ಎಕ್ಸ್‌ನ ಪ್ರಧಾನ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ, ಶಿವಶಂಕರ್ 2016 ರಲ್ಲಿ ಟೈಮ್ ನೌ ಚಾನೆಲ್‌ಗೆ ಸೇರಿಕೊಂಡಿದ್ದರು. ಪತ್ರಕರ್ತರಾಗಿ ಎರಡು ದಶಕಗಳ ಅನುಭವ ಹೊಂದಿರುವ ಅವರು ಹೆಡ್‌ಲೈನ್ಸ್ ಟುಡೇ ಮತ್ತು ಇಂಡಿಯಾ ಟುಡೇಯಲ್ಲೂ ಸೇವೆ ಸಲ್ಲಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News