×
Ad

ಪಂಜಾಬ್: ಪಾಕ್ ಡ್ರೋನ್ ಅನ್ನು ಹೊಡೆದುರುಳಿಸಿದ ಬಿಎಸ್ ಎಫ್

Update: 2023-06-24 13:28 IST

ತರನ್ ತಾರನ್ (ಪಂಜಾಬ್): ಪಂಜಾಬ್ ನ ತರನ್ ತಾರನ್ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (ಬಿಎಸ್ ಎಫ್) ಶುಕ್ರವಾರ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಭದ್ರತಾ ಪಡೆಯ ವಕ್ತಾರರು ತಿಳಿಸಿದ್ದಾರೆ.

"ಬಿಎಸ್ ಎಫ್ ಪಡೆಗಳು ತರನ್ ತಾರನ್ ಜಿಲ್ಲೆಯ ಲಖನಾ ಗ್ರಾಮದ ಬಳಿ ಭಾರತೀಯ ವಾಯುಪ್ರದೇಶವನ್ನು ಉಲ್ಲಂಘಿಸಿದ ಪಾಕಿಸ್ತಾನಿ ಡ್ರೋನ್ (ಡಿಜೆಐ ಮ್ಯಾಟ್ರಿಸ್ 300 ಆರ್ಟಿಕೆ) ಅನ್ನು ತಡೆ ಹಿಡಿದು ಉರುಳಿಸಿವೆ. ಮತ್ತೊಮ್ಮೆ, ಪಾಕಿಸ್ತಾನದ ದುಷ್ಕ್ರ ತ್ಯವನ್ನು ಬಿಎಸ್ಎಫ್ ವಿಫಲಗೊಳಿಸಿದೆ" ಎಂದು ಬಿಎಸ್ಎಫ್ ಪಂಜಾಬ್ ಫ್ರಾಂಟಿಯರ್ ಟ್ವೀಟ್ ಮಾಡಿದೆ.

ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದಕ್ಕೂ ಮೊದಲು ಜೂನ್ 22 ರಂದು ಪಂಜಾಬಿನ ಫಾಝಿಲ್ಕಾದಲ್ಲಿ ಬಿಎಸ್ ಎಫ್ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ ಹಾಗೂ ಅಬೋಹರ್ ಗಡಿಯ ಬಳಿ ಎರಡು ಶಂಕಿತ ಮಾದಕವಸ್ತು ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News