ಉಡುಪಿ: ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣ; ಕಾಲೇಜಿಗೆ ಭೇಟಿ ನೀಡಿದ ಖುಷ್ಬೂ
Update: 2023-07-27 10:21 IST
ಉಡುಪಿ: ಉಡುಪಿ ನೇತ್ರದ ಜ್ಯೋತಿ ಪ್ಯಾರಾಮೆಡಿಕಲ್ ಕಾಲೇಜಿನ ಶೌಚಾಲಯದಲ್ಲಿ ವಿಡಿಯೋ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಖುಷ್ಬೂ ಸುಂದರ್ ಇಂದು ಬೆಳಿಗ್ಗೆ ಕಾಲೇಜಿಗೆ ಭೇಟಿ ನೀಡಿದರು.
ಪ್ರಕರಣದ ವಿಚಾರಣೆಗಾಗಿ ಕಾಲೇಜಿಗೆ ಆಗಮಿಸಿದ ಖುಷ್ಬೂ ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದರು. ಇದೇ ವೇಳೆ ಘಟನೆ ನಡೆದ ಶೌಚಾಲಯ ವನ್ನು ಕೂಡ ಅವರು ಪರಿಶೀಲಿಸಿದರು.
ಈ ಸಂದರ್ಭದಲ್ಲಿ ಕಾಲೇಜಿನ ನಿರ್ದೇಶಕಿ ರಶ್ಮಿ ಕಷ್ಣ ಪ್ರಸಾದ್ , ಎಸ್ಪಿ ಅಕ್ಷಯ್ ಹಾಕೇ ಮಚ್ಚಿಂದ್ರ, ನ್ಯಾಯವಾದಿ ಮೇರಿ ಶ್ರೇಷ್ಠ, ಕಾಲೇಜಿನ ಮುಖ್ಯ ಶೈಕ್ಷಣಿಕ ಸಂಯೋಜನಾಧಿಕಾರಿ ಬಾಲಕೃಷ್ಣ ಪರ್ಕಳ, ಪ್ರಾಂಶುಪಾಲ ರಾಜೀಬ್ ಮಂಡಲ್ ಉಪಸ್ಥಿತರಿದ್ದರು.