×
Ad

ಪಿಸಿಎ ಸ್ಟೇಡಿಯಂನ ಎರಡು ಸ್ಟ್ಯಾಂಡ್‌ಗಳಿಗೆ ಹರ್ಮನ್‌ಪ್ರೀತ್, ಯುವರಾಜ್ ಹೆಸರಿಡಲು ನಿರ್ಧಾರ

Update: 2025-11-29 23:01 IST

 ಹರ್ಮನ್‌ಪ್ರೀತ್, ಯುವರಾಜ್ | Photo Credit : NDTV 

ಚಂಡಿಗಡ: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಮುಲ್ಲನ್‌ಪುರದಲ್ಲಿ ಡಿ.11ರಂದು ನಡೆಯಲಿರುವ ನಾಲ್ಕನೇ ಟಿ-20 ಪಂದ್ಯದ ವೇಳೆ ಭಾರತದ ವಿಶ್ವಕಪ್ ವಿಜೇತ ನಾಯಕಿ ಹರ್ಮನ್‌ಪ್ರೀತ್ ಕೌರ್ ಹಾಗೂ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್‌ಗೆ ಗೌರವ ಸಲ್ಲಿಸುವ ಸಲುವಾಗಿ ಅವರ ಹೆಸರಿನ ಸ್ಟ್ಯಾಂಡ್‌ಗಳನ್ನು ಅನಾವರಣಗೊಳಿಸಲು ಪಂಜಾಬ್ ಕ್ರಿಕೆಟ್ ಸಂಸ್ಥೆ ನಿರ್ಧರಿಸಿದೆ.

ಪಿಸಿಎ ಕಾರ್ಯದರ್ಶಿ ಸಿದ್ದಾಂತ್ ಶರ್ಮಾ ಈ ನಿರ್ಧಾರನ್ನು ಖಚಿತಪಡಿಸಿದ್ದಾರೆ. ಪಂಜಾಬ್‌ನ ಇಬ್ಬರು ಪ್ರಭಾವಿ ಕ್ರಿಕೆಟಿಗರಿಗೆ ನೀಡುವ ಗೌರವ ಇದಾಗಿದೆ ಎಂದು ಶರ್ಮಾ ಬಣ್ಣಿಸಿದರು.

ಕೌರ್ ನ.2ರಂದು ನವಿಮುಂಬೈನಲ್ಲಿ ನಡೆದ ಐಸಿಸಿ ಮಹಿಳೆಯರ ವಿಶ್ವಕಪ್ ಟೂರ್ನಿಯಲ್ಲಿ ಐತಿಹಾಸಿಕ ಟ್ರೋಫಿಯನ್ನು ಜಯಿಸಿದ್ದರು. 2007ರ ಟಿ-20 ಹಾಗೂ 2011ರ ಏಕದಿನ ವಿಶ್ವಕಪ್ ಜಯಿಸಿರುವ ಯವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಓರ್ವ ಶ್ರೇಷ್ಠ ಆಟಗಾರನಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News