ವಿಪರೀತ ಮಳೆ: ಹೊಳೆಯ ಸೆಳೆತಕ್ಕೆ ಸಿಲುಕಿ ವೃದ್ದೆ ಮೃತ್ಯು
Update: 2025-08-09 21:16 IST
ಮಣಿಪಾಲ, ಆ.9: ವಿಪರೀತ ಮಳೆಯಿಂದ ತುಂಬಿ ಹರಿಯುತ್ತಿರುವ ಹೊಳೆಯ ನೀರಿನ ಸೆಳೆತಕ್ಕೆ ಸಿಕ್ಕಿ ವೃದ್ದೆಯೊಬ್ಬರು ಮೃತಪಟ್ಟ ಘಟನೆ ಹಿರೇಬೆಟ್ಟು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಸರಸ್ವತಿ (93) ಎಂದು ಗುರುತಿಸಲಾಗಿದೆ. ಇವರು ಆ.5ರಂದು ನೆರೆ ಮನೆಗೆ ಎಲೆ ಅಡಿಕೆ ತಿಂದು ಬರುವುದಾಗಿ ಹೇಳಿ ಹೋದವರು ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಬಳಿಕ ಹುಡುಕಾಡಿದಾಗ ಆ.8ರಂದು ಸಂಜೆ ಮನೆಯ ಹಿಂಭಾಗದಲ್ಲಿ ಹರಿಯುತ್ತಿರುವ ಗಾರುಡಿ ತಕ್ಷುಮತಿ ಹೊಳೆಯ ನೀರಿನ ದಂಡೆಯ ಮೇಲೆ ಅವರ ಮೃತದೇಹ ಪತ್ತೆಯಾಗಿದೆ.
ನೆರೆ ಮನೆಗೆ ಹೋಗಿ ಎಲೆ ಅಡಿಕೆ ತಿಂದು ಬಹಿರ್ದೆಸೆಗೆ ಹೊಳೆಯ ಬದಿಗೆ ಹೋದಾಗ ವಿಪರೀತ ಮಳೆಯಿಂದ ತುಂಬಿ ಹರಿಯುತ್ತಿರುವ ನೀರಿನ ಸೆಳೆತಕ್ಕೆ ಸಿಕ್ಕಿ ನೀರಿನಲ್ಲಿ ಮುಳುಗಿ ಮೃತ ಪಟ್ಟಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.