ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಿ: ರಿಯಾಝ್ ಅಹಮದ್ ರೋಣ್
‘ಕೈಯಲ್ಲಿ ಮಣ್ಣು- ಹೃದಯದಲ್ಲಿ ಭಾರತ’ ಅಭಿಯಾನ ಸಮಾರೋಪ
ಉಡುಪಿ: ದೇಶದ ಉಜ್ವಲ ಭವಿಷ್ಯಕ್ಕಾಗಿ ಮಕ್ಕಳಲ್ಲಿ ಪರಿಸರ ಪ್ರೇಮ ಮತ್ತು ಉದಾತ್ತ ಮೌಲ್ಯಗಳನ್ನು ಬಿತ್ತಬೇಕು ಎಂದು ಜಮಾಅತೆ ಇಸ್ಲಾಮೀ ಹಿಂದ್‌ನ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹಮದ್ ರೋಣ್ ಹೇಳಿದ್ದಾರೆ.
ಚಿಲ್ಡನ್ಸ್ ಇಸ್ಲಾಮಿಕ್ ಆರ್ಗನೈಝೇಶನ್(ಸಿಐಓ) ವತಿಯಿಂದ ರವಿವಾರ ಉಡುಪಿ ಯಲ್ಲಿ ಆಯೋಜಿಸಲಾದ ಕೈಯಲ್ಲಿ ಮಣ್ಣು- ಹೃದಯದಲ್ಲಿ ಭಾರತ ಎಂಬ ರಾಷ್ಟ್ರೀಯ ಅಭಿಯಾನದ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ವೇದಿಕೆಯಲ್ಲಿ ಸಿಐಓ ರಾಜ್ಯ ಘಟಕ ಸದಸ್ಯೆ ಮೆಹರುನ್ನಿಸಾ ಮಣಿಪಾಲ್, ಜಮಾಅತೆ ಇಸ್ಲಾಮೀ ಹಿಂದ್‌ನ ಉಡುಪಿ ನಗರ ಶಾಖೆಯ ಅಧ್ಯಕ್ಷ ನಿಸಾರ್ ಅಹಮದ್, ಮಹಿಳಾ ವಿಭಾಗದ ಅಧ್ಯಕ್ಷೆ ವಾಜಿದಾ ತಬಸ್ಸುಮ್ ಉಪಸ್ಥಿತರಿದ್ದರು.
ನೂರ್‌ಜಹಾನ್ ಕಟಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಮ್ಶಾದ್ ಹಸನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಕಳೆದ ಒಂದು ತಿಂಗಳಿನಿಂದ ರಾಷ್ಟದಾದ್ಯಂತ ಸಿಐಓ ವತಿಯಿಂದ ಮಕ್ಕಳ ಮೂಲಕ ಪರಿಸರ ಜಾಗೃತಿ, ಪ್ರಕೃತಿ ಸಂರಕ್ಷಣೆಯ ಕುರಿತು ವೈವಿಧ್ಯಮಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಮಕ್ಕಳು ತಮ್ಮ ತಮ್ಮ ಪರಿಸರ ದಲ್ಲಿ, ಶಾಲಾ-ಕಾಲೇಜು, ಕಛೇರಿ ಪಾರ್ಕ್, ಉದ್ಯಾನವನ, ಮಸೀದಿ, ಮದ್ರಸಾ, ಮಂದಿರ, ಚರ್ಚ್ ವೃದ್ಧಾಶ್ರಮಗಳ ವಠಾರದಲ್ಲಿ ತೆರಳಿ ಗಿಡ ನೆಡುವ ಹಾಗೂ ಪರಿಸರ ಸಂರಕ್ಷಣೆಯ ಕುರಿತು ಭಾಷಣ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪತ್ರಿಕಾಗೋಷ್ಠಿ, ರ್ಯಾಲಿಗಳ ಮೂಲಕ ಜಾಗೃತಿ ಮೂಡಿಸುವ ವೈವಿದ್ಯಮ ಕಾರ್ಯಕ್ರಮಗಳನ್ನು ಹಮಿಕೊಳ್ಳಲಾ ಗಿತ್ತು. ಉಡುಪಿ ಜಿಲ್ಲೆಯಲ್ಲೂ ಮಕ್ಕಳು ಸಕ್ರೀಯವಾಗಿ ಈ ಚಟುವಟಿಕೆಗಳಲ್ಲಿ ಪಾಲ್ಗೊಂಡರು ಮತ್ತು ಉಡುಪಿ ಜಿಲ್ಲೆಯಾದ್ಯಂತ 3,000ಕ್ಕೂ ಮಿಕ್ಕಿ ಗಿಡಗಳನ್ನು ನೆಡಲಾಯಿತು.