×
Ad

ಸ್ವಚ್ಛ ಭಾರತ ಪರಿಕಲ್ಪನೆ ಪ್ರತಿಯೊಬ್ಬರಲ್ಲೂ ಪಸರಿಸಲಿ: ಸುನೀಲ್ ನಾಯ್ಕ್

Update: 2025-09-16 18:23 IST

ಕೋಟ: ಸ್ವಚ್ಛ ಭಾರತ ಕಲ್ಪನೆ ದೇಶಾದ್ಯಂತ ಪಸರಿಸಿಕೊಂಡಿರುವಾಗ ಅದಕ್ಕಾಗಿ ನಾವೆಲ್ಲರೂ ಪಣತೊಡಬೇಕು ಎಂದು ಮೊಗವೀರ ಯುವ ಸಂಘದ ಕೋಟೇಶ್ವರ ಘಟಕದ ಮಾಜಿ ಅಧ್ಯಕ್ಷ ಸುನೀಲ್ ನಾಯ್ಕ್ ಹೇಳಿದ್ದಾರೆ.

ಕೋಟದ ಪಂಚವರ್ಣ ಯುವಕ ಮಂಡಲ ಪ್ರವರ್ತಿತ ಸಂಸ್ಥೆ ಪಂಚವರ್ಣ ಮಹಿಳಾ ಮಂಡಲದ ನೇತೃತ್ವದಲ್ಲಿ ಗೀತಾನಂದ ಫೌಂಡೇಶನ್ ಮಣೂರು, ಹಂದಟ್ಟು ಮಹಿಳಾ ಬಳಗ ಕೋಟ, ಮಣೂರು ಫ್ರೆಂಡ್ಸ್, ಜೆಸಿಐ ಸಿನಿಯರ್ ಲಿಜನ್ ಕೋಟ ಇವರ ಸಹಯೋಗದೊಂದಿಗೆ ಮೊಗವೀರ ಯುವ ಸಂಘಟನೆ ಕೋಟೇಶ್ವರ ಇವರ ಸಂಯೋಜನೆ ಯೊಂದಿಗೆ 271ನೇ ಪರಿಸರ ಸ್ನೇಹಿ ಅಭಿಯಾನದ ಪ್ರಯುಕ್ತ ಕುಂಭಾಶಿಯ ಆನೆಗುಡ್ಡೆ ಶ್ರೀ ವಿನಾಯಕ ದೇಗುಲದ ಪರಿಸರ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡುತಿದ್ದರು.

ಈ ಸಂದರ್ಭದಲ್ಲಿ ಸ್ವಚ್ಛತಾ ತಂಡಗಳ ಪರವಾಗಿ ಮೊಗವೀರ ಯುವ ಸಂಘಟನೆ ಕೋಟೇಶ್ವರ ಘಟಕದ ಅಧ್ಯಕ್ಷ ರಾಘವೇಂದ್ರ ಕೊಮೆ ಅವರನ್ನು ಸನ್ಮಾನಿಸಲಾಯಿತು. ದೇಗುಲದ ಮುಕ್ತೇಸರ ಶ್ರೀಮರಣ ಉಪಾಧ್ಯಾ ಮಾರ್ಗ ದರ್ಶನದಲ್ಲಿ ಅವರ ಪರವಾಗಿ ದೇಗುಲದ ಪ್ರಬಂಧಕ ನಟರಾಜ್ ಕಾರಂತ ಸಂಘಟಕರನ್ನು ಗೌರವಿಸಿದರು.

ಕೋಟದ ಪಂಚವರ್ಣ ಯುವಕ ಮಂಡಲದ ಉಪಾಧ್ಯಕ್ಷ ದಿನೇಶ್ ಆಚಾರ್, ನಿಕಟಪೂರ್ವ ಅಧ್ಯಕ್ಷ ಅಜಿತ್ ಆಚಾರ್, ಗಿರೀಶ್ ಆಚಾರ್, ಮಹಿಳಾ ಮಂಡಲದ ಅಧ್ಯಕ್ಷೆ ಲಲಿತಾ ಪೂಜಾರಿ, ಕಾರ್ಯಾಧ್ಯಕ್ಷೆ ಕಲಾವತಿ ಅಶೋಕ್, ಮೊಗವೀರ ಯುವ ಸಂಘದ ಗೌರವಾಧ್ಯಕ್ಷ ಆನಂದ್ ಕುಂದರ್, ಕಾರ್ಯದರ್ಶಿ ನೆಗಿ ನಾಗರಾಜ್ ತೆಕ್ಕಟ್ಟೆ, ಪದಾಧಿಕಾರಿಗಳಾದ ರಾಜೇಶ್ ಕಾಂಚನ್ ಮತ್ತಿತರರು ಉಪಸ್ಥಿತರಿದ್ದರು. ರವೀಂದ್ರ ಕೋಟ ಕಾರ್ಯಕ್ರಮ ನಿರೂಪಿಸಿ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News