ಜುಗಾರಿ ನಿರತ ನಾಲ್ವರ ಬಂಧನ: ಪ್ರಕರಣ ದಾಖಲು
Update: 2025-09-18 21:51 IST
ಕುಂದಾಪುರ, ಸೆ.18: ಇಸ್ಪೀಟ್ ಜುಗಾರಿಯಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸಿದ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಲ್ವಾಡಿ ಗ್ರಾಮದಲ್ಲಿ ಸೆ.17ರಂದು ನಡೆದಿದೆ.
ಕಾರ್ಕಳ ಮೂಲದ ಸಮರ್ಥ (27), ಬೈಂದೂರು ತಗ್ಗರ್ಸೆಯ ಕಿಶನ್ (45), ಮಂಗಳೂರಿನ ಪ್ರದೀಪ (42), ಗುಲ್ವಾಡಿಯ ನಿಸಾರ್ ಶೇಖ್ (42) ಬಂಧಿತರು. ಒಂದಷ್ಟು ಜುಗಾರಿಕೋರರು ಹಾಡಿಯಲ್ಲಿ ಓಡಿ ಪರಾರಿಯಾಗಿ ದ್ದಾರೆ. ಇಸ್ಪೀಟ್ ಜುಗಾರಿ ಆಟಕ್ಕೆ ಬಳಸಿದ 11,620 ರೂ. ನಗದು, ಪರಿಕರ ಸಹಿತ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.