ಮಲ್ಪೆ: ‘ಮೆಹ್ಫಿಲ್- ಎ-ಝಾಯಿಕಾ’ ಆಹಾರ ಮೇಳ
ಮಲ್ಪೆ, ಸೆ.22: ಮಲ್ಪೆಯ ಎಸ್.ಐ.ಓ. ಹಾಗೂ ಜೆ.ಏ.ಸಿ. ಜಂಟಿ ಆಶ್ರಯದಲ್ಲಿ ‘ಮೆಹ್ಫಿಲ್- ಎ-ಝಾಯಿಕಾ’ ಆಹಾರ ಮೇಳವನ್ನು ರವಿವಾರ ಮಲ್ಪೆ ಜಾಮಿಯಾ ಮಸ್ಜಿದ್’ನ ಆವರಣದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಮಲ್ಪೆಯ ಹಿರಿಯ ಎಫ್.ಎಂ.ಇಸ್ಮಾಯೀಲ್ ಉದ್ಘಾಟಿಸಿದರು. ಮಲ್ಪೆ ಜಾಮಿಯಾ ಮಸೀದಿಯ ಧರ್ಮಗುರು ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಹಾಗೂ ಎಸ್.ಐ.ಓ. ಮಲ್ಪೆ ಶಾಖೆಯ ಅಧ್ಯಕ್ಷ ಶೇಖ್ ಅಯಾನ್ ಮಲ್ಪೆ ಮಾತನಾಡಿದರು.
ಈ ಮೇಳದಲ್ಲಿ ಸುಮಾರು 45 ಮಕ್ಕಳು ತಮ್ಮ ಮನೆಯಲ್ಲಿ ತಯಾರು ಮಾಡಿದಂತಹ ತರಹೇವಾರಿ ಆಹಾರ ಗಳನ್ನು, ವಿವಿಧ ರೀತಿಯ ತಿಂಡಿ, ಸಿಹಿ ತಿನಿಸುಗಳನ್ನು ಸುಮಾರು 17 ಕೌಂಟರ್‌ಗಳಲ್ಲಿ ಪ್ರದರ್ಶಿಸಿದರು. ಸುಮಾರು 500ಕ್ಕೂ ಅಧಿಕ ಮಂದಿ ಇದರ ಪ್ರಯೋಜನ ಪಡೆದುಕೊಂಡರು.
ಜಮಾಅತೆ ಇಸ್ಲಾಮೀ ಹಿಂದ್ ಮಲ್ಪೆ ಶಾಖೆಯ ಅಧ್ಯಕ್ಷರು, ಫುಡ್ ಫೆಸ್ಟ್ ಸಂಚಾಲಕ ಝುಹೀದ್ ಮುಜಾಹಿದ್, ಜಾಮಿಯಾ ಮಸ್ಜಿದ್‌ನ ಆಡಳಿತ ಮಂಡಳಿಯ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿ ಇರ್ಶಾದುಲ್ಲಾ ಖಾನ್ ಕುರಾನ್ ಪಠಿಸಿದರು.