ಮಹಿಳೆಯ ಕತ್ತಿನಲ್ಲಿದ ಕರಿಮಣಿ ಸುಲಿಗೆ: ಪ್ರಕರಣ ದಾಖಲು
Update: 2025-09-22 21:04 IST
ಬ್ರಹ್ಮಾವರ, ಸೆ.22: ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಕತ್ತಿನಲ್ಲಿದ್ದ ಚಿನ್ನದ ಕರಿಮಣಿಯನ್ನು ಬೈಕಿನಲ್ಲಿ ಬಂದ ಇಬ್ಬರು ಅಪರಿಚಿತರು ಸುಲಿಗೆ ಮಾಡಿ ಪರಾರಿಯಾಗಿರುವ ಘಟನೆ ಸೆ.21ರಂದು ಬೆಳಗ್ಗೆ ಉಪ್ಪೂರು ಗ್ರಾಮದ ಕುದ್ರುಬೆಟ್ಟು ರಸ್ತೆಯಲ್ಲಿ ನಡೆದಿದೆ.
ಕುದ್ರುಬೆಟ್ಟು ನಿವಾಸಿ ರಮಾಬಾಯಿ(57) ಎಂಬವರು ಉಪ್ಪೂರು ಬಸ್ಸು ನಿಲ್ದಾಣದ ಬಳಿಯಿಂದ ಮೀನು ತೆಗೆದು ಕೊಂಡು ಮನೆಗೆ ನಡೆದುಕೊಂಡು ಬರುತ್ತಿದ್ದು, ಈ ವೇಳೆ ಬೈಕಿನಲ್ಲಿ ರಮಾಬಾಯಿ ಅವರ ಬಳಿ ಬಂದ ಇಬ್ಬರು ಅವರ ಕುತ್ತಿಗೆಯಲ್ಲಿದ್ದ ಸುಮಾರು 4.5 ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಎಳೆದು ಸುಲಿಗೆ ಮಾಡಿ ಉಪ್ಪೂರು ಕಡೆಗೆ ಪರಾರಿಯಾದರು ಎಂದು ದೂರಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.