ಉಡುಪಿ: ಜಿಲ್ಲಾ ಕಾಂಗ್ರೆಸ್‌ನಿಂದ ಗಾಂಧಿ, ಶಾಸ್ತ್ರಿ ಜಯಂತಿ
ಕಿಸಾನ್ ಕಾಂಗ್ರೆಸ್‌ನಿಂದ ಸಾಧಕರಿಗೆ ಸನ್ಮಾನ
ಉಡುಪಿ, ಅ.2: ಉಡುಪಿ ಜಿಲ್ಲಾ ಕಾಂಗ್ರೆಸ್ ಹಾಗೂ ಜಿಲ್ಲಾ ಕಿಸಾನ್ ಕಾಂಗ್ರೆಸ್‌ನ ಜಂಟಿ ಆಶ್ರಯದಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಅವರ ಜಯಂತಿ ಕಾರ್ಯಕ್ರಮ ಇಂದು ಬ್ರಹ್ಮಗಿರಿ ಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಇದೇ ಸಂದರ್ಭದಲ್ಲಿ ಉಡುಪಿ ಜಿಲ್ಲಾ ಕಿಸಾನ್ ಕಾಂಗ್ರೆಸ್‌ನ ವತಿಯಿಂದ ಸಾಧಕ ಶಿಕ್ಷಕರಾದ ಕುಂದಾಪುರ ತಾಲೂಕು ತೆಕ್ಕಟ್ಟೆಯ ಭಾಸ್ಕರ ಶೆಟ್ಟಿ ಹಾಗೂ ಅದಮಾರು ಹಿಂದೂ ಹಿರಿಯ ಪ್ರಾಥಮಿಕ ಶಾಲೆಯ ದೇವಿಕಾ ಟೀಚರ್ ಇವರನ್ನು ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಜಾನಪದ ವಿದ್ವಾಂಸ ಹಾಗೂ ಚಿಂತಕ ಡಾ.ಗಣನಾಥ ಎಕ್ಕಾರು ಹಾಗೂ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜ್ಯೋತಿ ಹೆಬ್ಬಾರ್ ಅವರು ಗಾಂಧೀಜಿ ಮತ್ತು ಲಾಲ್ ಬಹಾದ್ದೂರ್ ಶಾಸ್ತ್ರಿ ಗಳ ವ್ಯಕ್ತಿತ್ವ, ಸಾದನೆಗಳ ಕುರಿತು ವಿವರಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಜಯಪ್ರಕಾಶ್ ಹೆಗ್ಡೆ, ವಿನಯಕುಮಾರ್ ಸೊರಕೆ, ಎಂ.ಎ.ಗಫೂರ್, ಮಂಜುನಾಥ ಪೂಜಾರಿ, ಪ್ರಸಾದ್‌ರಾಜ್ ಕಾಂಚನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಹಮೀದ್ ಅಲಿ, ಹರೀಶ್ ಕಿಣಿ, ಕಿಸಾನ್ ಕಾಂಗ್ರೆಸ್‌ನ ಶೇಖರ ಕೋಟ್ಯಾನ್, ಅಬ್ದುಲ್ ಹಮೀದ್ ಉದ್ಯಾವರ, ಉದಯ ಎಚ್., ಪ್ರಕಾಶಪೂಜಾರಿ ಹೆಬ್ರಿ, ರಾಯ್ ಮೆರ್ವಿನ್ ಫೆರ್ನಾಂಡೀಸ್, ನಾಗಪ್ಪ ಕೊಟ್ಟಾರಿ ವಂಡ್ಸೆ ಮುಂತಾದವರು ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎಲ್ಲೂರು ಶಶಿಧರ ಶೆಟ್ಟಿ, ಕಿಸಾನ್ ಕಾಂಗ್ರೆಸ್‌ನ ಸಾಧನೆ ಹಾಗೂ ಕಾರ್ಯಕ್ರಮ ಗಳ ಕುರಿತು ಮಾಹಿತಿ ನೀಡಿದರು. ಅಣ್ಣಯ್ಯ ಶೇರಿಗಾರ್ ಹಾಗೂ ಗೋವರ್ಧನ ಜೋಗಿ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.