×
Ad

ಇಂದ್ರಾಳಿ ಸೇತುವೆ ಲೋಕಾರ್ಪಣೆಯ ಪ್ರಯುಕ್ತ ಹರ್ಷೋತ್ಸವ

Update: 2025-10-14 20:23 IST

ಉಡುಪಿ, ಅ.14: ಉಡುಪಿ ಜಿಲ್ಲಾ ನಾಗರೀಕ ಸಮಿತಿ ಟ್ರಸ್ಟ್ ವತಿಯಿಂದ ಇಂದ್ರಾಳಿಯ ಮೇಲ್ಸೇತುವೆ ಲೋಕಾ ರ್ಪಣೆಯ ಪ್ರಯುಕ್ತವಾಗಿ ಹರ್ಷೋತ್ಸವ ಕಾರ್ಯಕ್ರಮವು ಮಂಗಳವಾರ ನಡೆಯಿತು.

ಇಂದ್ರಾಳಿಯ ನವೀಕೃತ ಮೇಲ್ಸೇತುವೆ ಸಮೀಪ ನಡೆದ ಕಾರ್ಯಕ್ರಮದಲ್ಲಿ ಮಾತಾನಾಡಿದ ಪೇಜಾವರ ಅಧೋಕ್ಷಜ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸೇತುವೆ ಬಳಿ ವಿದ್ಯಾ ಸಂಸ್ಥೆಗಳಿದ್ದು, ಶಾಲಾ ವಿದ್ಯಾರ್ಥಿ ಗಳು ವಾಹನ ದಟ್ಟಣೆ ಇರುವ ಹೆದ್ದಾರಿ ದಾಟಲು ಅಪಾಯ ಎದುರಿಸಬೇಕಾದ ಪರಿಸ್ಥಿತಿ ಇದ್ದು, ಜನಪ್ರತಿನಿಧಿಗಳು ಸೂಕ್ತ ಮಾರ್ಗದ ವ್ಯವಸ್ಥೆಗೊಳಿಸಲು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಯಶಪಾಲ್ ಸುವರ್ಣ, ಡಿವೈಎಸ್ಪಿ ಡಿ.ಟಿ ಪ್ರಭು, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ನಾಗರೀಕ ಸಮಿತಿಯ ಅಧ್ಯಕ್ಷ ಎಂ.ನಾಗೇಶ್ ಹೆಗ್ಡೆ, 80 ಬಡಗುಬೆಟ್ಟು ಪಂಚಾಯತ್ ಅಧ್ಯಕ್ಷ ಕೇಶವ ಕೋಟ್ಯಾನ್, ನಾಗರಿಕ ಸಮಿತಿಯ ಕಾರ್ಯಕರ್ತರಾದ ಕೆ.ಬಾಲಗಂಗಾಧರ್ ರಾವ್, ತಾರಾನಾಥ್ ಮೇಸ್ತ ಶಿರೂರು, ಸತೀಶ್ ಕುಮಾರ್, ಯಾದವ್, ಜಯಶ್ರೀ, ಅಶ್ವಿನಿ, ಪ್ರಶಾದ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಸಹಭಾಗಿತ್ವ ವಹಿಸಿದ್ದ ಉಡುಪಿಯ ಜಹಾಂಗೀರ್ ಭಟ್ಸ್ ಸ್ವೀಟ್ಸ್ ಹೌಸ್, ಹಾಗೂ ವೇದಾಂತ್ ವೆಜ್ ರೆಸ್ಟೊರೆಂಟಿನ ನುರಿತ ಸಿಹಿ ಖಾದ್ಯತಜ್ಞರು ಸ್ಥಳದಲ್ಲಿಯೇ ತಯಾರಿಸಲಾದ 4 ಸಾವಿರ ಜೀಲೆಬಿಯನ್ನು ಸಾರ್ವಜನಿಕರಿಗೆ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News