×
Ad

ಕಾರ್ಕಳ ಮಿಯ್ಯಾರು ಲವ ಕುಶ ಕಂಬಳಕ್ಕೆ ವಿದ್ಯುಕ್ತ ಚಾಲನೆ

Update: 2026-01-03 12:45 IST

ಕಾರ್ಕಳ : ಮಿಯ್ಯಾರು ಲವ ಕುಶ ಕಂಬಳದ ಕೆರೆಗೆ ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಬಳಿಕ ಶಾಸಕ ವಿ. ಸುನೀಲ್ ಕುಮಾರ್ ಜ್ಯೋತಿ ಬೆಳಗಿಸಿ ಉದ್ಘಾಟಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದರು.

 

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಮಿಯ್ಯಾರು ಗ್ರಾಪಂ ಅಧ್ಯಕ್ಷೆ ಸನ್ಮತಿ ನಾಯಕ್, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಎಸ್. ಕೋಟ್ಯಾನ್, ಮಿಯ್ಯಾರು ಚರ್ಚ್ ಧರ್ಮಗುರು ರೆ. ಫಾ. ಕ್ಯಾನ್ವಿಟ್ ಬರ್ಬೋಝ, ಮಿಯ್ಯಾರು ಲವ ಕುಶ ಕಂಬಳ ಸಮಿತಿಯ ಕಾರ್ಯಾಧ್ಯಕ್ಷ ಜೀವನ್ ದಾಸ್ ಅಡ್ಯಂತಾಯ, ಸಂಘಟನಾ ಪ್ರಧಾನ ಕಾರ್ಯದರ್ಶಿ, ಕಂಬಳದ ಬೀಷ್ಮ ಪ್ರೊ.ಗುಣಪಾಲ್ ಕಡಂಬ, ಕೋಶಾಧಿಕಾರಿ ಶ್ಯಾಮ್ ಎನ್ ಶೆಟ್ಟಿ, ಸಹ ಕೋಶಾಧಿಕಾರಿ ರವೀಂದ್ರ ಕುಮಾರ್ ಕುಕ್ಕುಂದೂರು, ಕಾರ್ಯದರ್ಶಿ ದಯಾನಂದ ಬಂಗೇರ, ಉಪಾಧ್ಯಕ್ಷ ಅಂಥೋನಿ ಡಿಸೋಜ ನಕ್ರೆ, ಉದಯ ಎಸ್. ಕೋಟ್ಯಾನ್, ಜೊತೆ ಕಾರ್ಯದರ್ಶಿ ವಿಜಯ ಕುಮಾರ್ ಕಂಗಿನಮನೆ, ಗ್ರಾಪಂ ಸದಸ್ಯ ಮಾಧವ ಕಾಮತ್, ಸ್ವರ್ಣ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಬ್ಬೀರ್ ಅಹ್ಮದ್, ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್ ಕುಮಾರ್, ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಬಜಗೋಳಿ, ಉದ್ಯಮಿ ಸುನೀಲ್ ಬಜಗೋಳಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್, ಬಿಜೆಪಿ ಅಧ್ಯಕ್ಷ ನವೀನ್ ನಾಯ್ಕ್, ಮಿಯ್ಯಾರು, ಮುಂಬೈ ಉದ್ಯಮಿ ಅರುಣ್ ಮಹಾಬಲ ಪೂಜಾರಿ, ಕಾರ್ಕಳ ಸರ್ಕಲ್ ಇನ್ಸ್ಪೆಕ್ಟರ್ ಬಿ ಆರ್ ಮಂಜಪ್ಪ, ಕಾರ್ಕಳ ನಗರ ಠಾಣಾ ಪಿಎಸ್ಸೈಗಳಾದ ಮುರಳೀಧರ, ಶಿವ ಕುಮಾರ್ ಎಸ್.ಆರ್., ಅಮ್ಮನ ನೆರವು ಚಾರಿಟೇಬಲ್ ಅಧ್ಯಕ್ಷ ಅವಿನಾಶ್ ಜಿ ಶೆಟ್ಟಿ, ಉದ್ಯಮಿಗಳಾದ

ಜಯರಾಮ್ ಪ್ರಭು, ಉಮೇಶ್ ರಾವ್ ಚಿರಾಗ್, ರಾಜು ಎಂ. ಶೆಟ್ಟಿ, ನಿತೇಶ್ ಕುಮಾರ್, ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News