×
Ad

ದರ್ಸ್ ರಂಗವನ್ನು ಹೆಚ್ಚಿಸಲು ಉಲಮಾಗಳ ಪಾತ್ರ ಮುಖ್ಯ: ಕುಂಬೋಳ್ ತಂಙಳ್

Update: 2026-01-28 22:00 IST

ಉಡುಪಿ, ಜ.28: ರಾಜ್ಯ ಉಲಮಾ ಒಕ್ಕೂಟದ ನಿರ್ದೇಶನದಂತೆ ಉಡುಪಿ ಜಿಲ್ಲಾ ಉಲಮಾ ಕ್ಯಾಂಪ್ ಮೂಳೂರು ಸುನ್ನೀ ಸೆಂಟರ್ ಸಂಸ್ಥೆಯಲ್ಲಿ ನಡೆಯಿತು

ಉಲಮಾ ಕ್ಯಾಂಪ್‌ನ್ನು ಉದ್ಘಾಟಿಸಿದ ಕೇಂದ್ರ ಮುಶಾವರ ಉಪಾಧ್ಯಕ್ಷ, ಡಿಕೆಎಸ್‌ಸಿ ಸಂಸ್ಥೆಯ ಅಧ್ಯಕ್ಷ ಖುದುವತು ಸ್ಸಾದಾತ್ ಅಸ್ಸಯ್ಯಿದ್ ಕೆ.ಎಸ್. ಆಟ್ಟಕೋಯ ತಂಙಳ್ ಕುಂಬೋಳ್ ಮಾತನಾಡಿ, ಆಧುನಿಕತೆಯ ಈ ಕಲುಷಿತ ವಾತಾವರಣದಲ್ಲಿ ನಮ್ಮ ಸಮೂಹ ಅದಕ್ಕೆ ಹೊಂದಿಕೊಂಡು ಬೆಳೆಯುತ್ತಿದೆ. ನಾವು ಧಾರ್ಮಿಕ ವಿದ್ಯೆಗೆ ಒತ್ತು ಕೊಡದಿದ್ದರೆ ನಮ್ಮ ಸಮೂಹ ಕೈ ತಪ್ಪುವ ಸಾಧ್ಯತೆಗಳು ಬಹಳ ಹೆಚ್ಚಿದೆ. ಹಳೆಯ ಕಾಲದ ಪಳ್ಳಿ ದರ್ಸುಗಳನ್ನು ಹೆಚ್ಚಿಸಬೇಕು. ತಮ್ಮ ತಮ್ಮ ಮೊಹಲ್ಲಾ ಗಳಲ್ಲಿ ಪಳ್ಳಿ ದರ್ಸ್ ಆರಂಭಿಸಬೇಕು. ಇದು ಉಲಮಾಗಳ ಜವಾಬ್ದಾರಿ ಆಗಿದೆ ಎಂದು ತಿಳಿಸಿದರು.

ಕಾರ್ಯಕ್ರಮಕ್ಕೆ ಮೂಳೂರು ಮುದರ್ರಿಸ್ ಹಾಫಿಳ್ ಅಶ್ರಫ್ ಸಖಾಫಿ ಉಸ್ತಾದ್ ದುವಾದೊಂದಿಗೆ ಚಾಲನೆ ನೀಡಲಾ ಯಿತು. ಅಧ್ಯಕ್ಷತೆಯನ್ನು ನಿರ್ವಹಣಾ ಸಮಿತಿಯ ಅಧ್ಯಕ್ಷ ಯು.ಕೆ.ಮುಸ್ತಫಾ ಸಅದಿ ಉಸ್ತಾದ್ ವಹಿಸಿದ್ದರು. ದೀನೀ ಪ್ರಭೋದನೆ ಹೇಗಿರಬೇಕೆಂಬ ವಿಷಯದಲ್ಲಿ ಇಬ್ರಾಹಿಂ ಸಖಾಫಿ ಪುಝಕ್ಕಾಟೀರಿ, ಸುನ್ನತ್ ಮತ್ತು ಬಿದ್ ಅತ್ ಎಂಬ ವಿಷಯದಲ್ಲಿ ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ ಹಾಗೂ ತ್ವರೀಖತ್ ಎಂಬ ವಿಷಯದಲ್ಲಿ ಸ್ವಾಬಿರ್ ಸಅದಿ ಮೂಳೂರು ವಿಷಯ ಮಂಡಿಸಿದರು

ಸುನ್ನೀ ಸೆಂಟರ್ ಕೇಂದ್ರ ಸಮಿತಿ ನಾಯಕರಾದ ಅಸ್ಸಯ್ಯಿದ್ ಮುಹಮ್ಮದ್ ತಂಙಳ್ ಉಚ್ಚಿಲ, ಅಸ್ಸಯ್ಯಿದ್ ಅಲವಿ ತಂಙಳ್ ಕರ್ಕಿ, ಕಾಪು ಖಾಝಿ ಅಹ್ಮದ್ ಖಾಸಿಮಿ, ರಾಜ್ಯ ಮುಶಾವರ ಸದಸ್ಯರಾದ ಅಶ್ರಫ್ ಸಖಾಫಿ ಕನ್ನಂಗಾರು, ಜಿಲ್ಲಾ ಸುನ್ನೀ ಕೋ-ಓಡಿನೇಶ್ ಅಧ್ಯಕ್ಷ ಕೆ.ಎ. ಅಬ್ದುರ‌್ರಹ್ಮಾನ್ ರಝ್ವಿ ಕಲ್ಕಟ್ಟ, ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುರ‌್ರಝಾಖ್ ಖಾಸಿಮಿ ಕಾಪು, ಹಂಝ ಮದನಿ ಮಿತ್ತೂರು ಮೊದಲಾದವರು ಉಪಸ್ಥಿತರಿದ್ದರು

ಜಿಲ್ಲಾ ನಾಯಿಬ್ ಖಾಝಿ ಬಿ.ಕೆ.ಅಬ್ದುರ‌್ರಹ್ಮಾನ್ ಮದನಿ ಮೂಳೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಸಅದಿ ಅಫ್ಲಳಿ ಸ್ವಾಗತಿಸಿದರು. ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಫುರ್ಖಾನಿ ಉಚ್ಚಿಲ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News