ಕರಾವಳಿ ಕಾವಲು ಪೊಲೀಸರಿಂದ ಬೋಟು ಮಾಲಕರ ಸಭೆ
Update: 2026-01-28 22:12 IST
ಮಲ್ಪೆ, ಜ.28: ಕೋಡಿಬೆಂಗ್ರೆ ಅಳಿವೆ ಬಾಗಿಲಿನಲ್ಲಿ ಸಂಭವಿಸಿದ ಪ್ರವಾಸಿ ದೋಣಿ ದುರಂತದ ಹಿನ್ನೆಲೆಯಲ್ಲಿ ಕರಾವಳಿ ಕಾವಲು ಪೊಲೀಸ್ ಮಲ್ಪೆ ಠಾಣೆಯ ವ್ಯಾಪ್ತಿಯಲ್ಲಿ ಬರುವ ವಾಟರ್ ಸ್ಪೋರ್ಟ್ಸ್ ಮತ್ತು ಟೂರಿಸ್ಟ್ ಬೊಟುಗಳ ಮಾಲಕರ ಸಭೆಯನ್ನು ಮಲ್ಪೆ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಬುಧವಾರ ನಡೆಸಲಾಯಿತು.
ಕರಾವಳಿ ಕಾವಲು ಪೊಲೀಸ್ ಡಿವೈಎಸ್ಪಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಒಟ್ಟು 40 ಬೋಟುಗಳ ಮಾಲಕರು ಹಾಜರಿದ್ದರು. ಬೋಟ್ ಮಾಲಕರಿಗೆ ಉಡುಪಿ ಜಿಲ್ಲಾಧಿಕಾರಿಗಳು ಸಭೆಯಲ್ಲಿ ತಿಳಿಸಿದ ಸೂಚನೆಗಳನ್ನು ತಿಳಿಸಲಾ ಯಿತು ಹಾಗೂ ಮುಂದಿನ ದಿನಗಳಲ್ಲಿ ಸರಿಯಾದ ದಾಖಲೆಗಳನ್ನು ಕಡ್ದಾಯವಾಗಿ ಸಿದ್ಧಪಡಿಸಿಕೊಂಡು ಬೋಟ್/ಕಯಾಕಿಂಗ್ ಹಾಗೂ ಇನ್ನಿತರ ವಾಟರ್ ಸ್ಪೋರ್ಟ್ಸ್ ಚಟುವಟಿಕೆಗಳನ್ನು ನಡೆಸುವಂತೆ ತಿಳಿಸಲಾಯಿತು.