ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತ್ಯು
Update: 2026-05-20 22:12 IST
ಕಾರ್ಕಳ, ಮೇ 20: ಸಾಣೂರು ಗ್ರಾಮದ ರಾಜೇಶ್ವರಿ ನ್ಯಾಶನಲ್ ಸ್ಕೂಲ್ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೊಬ್ಬರು ಆಕಸ್ಮಿಕವಾಗಿ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮೇ 19ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ನೀಲಯ್ಯ ತುಕರಾಮ (57) ಎಂದು ಗುರುತಿಸಲಾಗಿದೆ. ಸುಧೀರ ಶೆಣೈ ಎಂಬಾತ ಯಾವುದೇ ಮುಂಜಾಗ್ರತ ಕ್ರಮ ವಹಿಸದೇ ನಿರ್ಲಕ್ಷತನದಿಂದ ನೀಲಯ್ಯ ತುಕರಾಮ ಅವರನ್ನು ಕೆಲಸ ಮಾಡಿಸಿದ್ದು, ಇದರಿಂದ ಅವರು ಮಹಡಿಯಿಂದ ನೆಲಕ್ಕೆ ಬಿದ್ದು ಗಂಭೀರ ಸ್ವರೂಪದ ಗಾಯಗೊಂಡು ಮೃತಪಟ್ಟಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.