ಹೂಡಿಕೆ ಹೆಸರಿನಲ್ಲಿ 2 ಲಕ್ಷ ರೂ. ಆನ್‌ಲೈನ್ ವಂಚನೆ: ಪ್ರಕರಣ ದಾಖಲು
Update: 2026-05-20 22:11 IST
ಕಾರ್ಕಳ, ಮೇ 20: ಹಣ ಹೂಡಿಕೆ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂ. ಆನ್‌ಲೈನ್ ವಂಚನೆ ಎಸಗಿರುವ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳದ ಗಣೇಶ ಎಂಬವರಿಗೆ ಜ.23ರಂದು ಅಪರಿಚಿತ ವ್ಯಕ್ತಿ ಸ್ಟಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆ ಮಾಡಿದರೇ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ ಅವರ ಬ್ಯಾಂಕ್ ಖಾತೆಯಿಂದ 2,00,000ರೂ. ಹಣವನ್ನು ಪಡೆದು ಕೊಂಡರು. ಬಳಿಕ ಪಡೆದುಕೊಂಡ ಹಣವನ್ನು ವಾಪಾಸು ನೀಡದೇ ಲಾಭಾಂಶವನ್ನು ಕೂಡ ಕೊಡದೆ ವಂಚಿಸಿರುವುದಾಗಿ ದೂರಲಾಗಿದೆ.