ತಂದೆಗೆ ಅನಾರೋಗ್ಯ: ಮಗ ಆತ್ಮಹತ್ಯೆ
Update: 2026-06-20 20:39 IST
ಹಿರಿಯಡ್ಕ, ಜೂ.20: ತಂದೆಯ ಅನಾರೋಗ್ಯದ ವಿಚಾರದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಮಾನಸಿಕ ಖಿನ್ನತೆಗೆ ಒಳಗಾಗಿದ್ದ ದೀಕ್ಷಿತ್(31) ಎಂಬವರು ಜೂ.19ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಚಾಕುವಿನಿಂದ ತನ್ನ ಕೈ ಮತ್ತು ತಲೆಯ ಬಳಿ ಕೊಯ್ದುಕೊಂಡು ಅಡುಗೆ ಕೋಣೆಯ ಕಬ್ಬಿಣದ ಕೊಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.