ತಂಬಾಕು ನಿಯಂತ್ರಣ ತನಿಖಾ ದಳದಿಂದ ದಾಳಿ: ದಂಡ ವಸೂಲಿ
Update: 2026-06-20 21:52 IST
ಉಡುಪಿ, ಜೂ.20: ಕಾಪು ತಾಲೂಕಿನಲ್ಲಿ ಕೋಟ್ಪಾ 2003 ಕಾಯಿದೆ ಯನ್ನು ಅನುಷ್ಟಾನಗೊಳಿಸುವ ನಿಟ್ಟಿನಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ನೇತೃತ್ವದಲ್ಲಿ ಗುರುವಾರ ಪಡುಬಿದ್ರಿ ಪೇಟೆ ಹಾಗೂ ಬಸ್‌ಸ್ಟಾಂಡ್‌ಗಳಲ್ಲಿ ತಂಬಾಕು ಮಾರಾಟದ ಅಂಗಡಿಗಳು, ಹೋಟೆಲ್‌ಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳ ಮೇಲೆ ದಾಳಿ ನಡೆಸಿ ಒಟ್ಟು 44 ಪ್ರಕರಣ ಗಳನ್ನು ದಾಖಲಿಸಿ, 17,000 ರೂ.ದಂಡ ವಸೂಲಿ ಮಾಡಲಾಯಿತು.
ದಾಳಿಯಲ್ಲಿ ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಹಿರಿಯ ಆರೊಗ್ಯ ನಿರೀಕ್ಷಣಾಧಿ ಕಾರಿಗಳಾದ ಬಸವರಾಜ್ ಜಾಡರ್ ಮತ್ತು ಜಗದೀಶ್ ರಾವ್, ಕ್ಷೇತ್ರ ಆರೊಗ್ಯ ಶಿಕ್ಷಣಾಧಿಕಾರಿ ಚಂದ್ರಕಲಾ, ತಾಲೂಕು ದೈಹಿಕ ಪರೀಕ್ಷಣಾಧಿಕಾರಿ ರವೀಂದ್ರ ನಾಯ್ಕ್, ಪಡುಬಿದ್ರಿ ಪೋಲಿಸ್ ಠಾಣೆಯ ಶ್ರೀಧರ್ ಆರ್, ಕಾರ್ಮಿಕ ನಿರೀಕ್ಷಕ ಎನ್.ಪಿ.ಎಲ್ ಸಂಜಯ್, ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಸಂಯೋಜಕಿ ಮಂಜುಳಾ ಹಾಗೂ ಸಾಮಾಜಿಕ ಕಾರ್ಯಕರ್ತ ಮಹೇಶ್ ಡಿ. ಭಂಡಾರಿ ಉಪಸ್ಥಿತರಿದ್ದರು.