ಉಡುಪಿ: ಗಾಳಿ-ಮಳೆಗೆ ಎರಡು ಮನೆಗಳಿಗೆ ಹಾನಿ
Update: 2026-07-04 21:17 IST
ಉಡುಪಿ, ಜು.4: ಶುಕ್ರವಾರ ಬೀಸಾದ ಗಾಳಿ-ಮಳೆಗೆ ಉಡುಪಿ ಜಿಲ್ಲೆಯಲ್ಲಿ ಎರಡು ಮನೆಗಳಿಗೆ ಬಾಗಶ: ಹಾನಿ ಯುಂಟಾಗಿದ್ದು ಸುಮಾರು 90 ಸಾವಿರ ರೂ.ಗಶಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಬೈಂದೂರಿನ ಜಲಜ ಪೂಜಾರ್ತಿ ಎಂಬವರ ವಾಸ್ತವ್ಯದ ಮನೆ ಮಳೆಯಿಂದ ಭಾಗಶ: ಕುಸಿದಿದ್ದು 50ಸಾವಿರ ರೂ.ಗಳಿಗೂ ಅಧಿಕ ನಷ್ಟವಾಗಿರುವುದಾಗಿ ಹೇಳಲಾಗಿದೆ. ಅದೇ ರೀತಿ ಕಾಪು ತಾಲೂಕಿನ ಪಲಿಮಾರು ಗ್ರಾಮದ ಜಯಂತಿ ಕೋಟ್ಯಾನ್ ಎಂಬವರ ಮನೆ ಮೇಲೆ ಮರಬಿದ್ದು ಹಾನಿಯಾಗಿದ್ದು 40,000ರೂ.ಗಳಷ್ಟು ನಷ್ಟದ ಅಂದಾಜು ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಇಂದು ಬೆಳಗಿನವರೆಗೆ ಸರಾಸರಿ 68.9ಮಿ.ಮೀ. ಮಳೆಯಾಗಿದೆ. ಕಾರ್ಕಳದಲ್ಲಿ ಅತ್ಯಧಿಕ 86.2 ಮೀ.ಮೀ. ಮಳೆಯಾಗಿದ್ದರೆ, ಕಾಪುವಿನಲ್ಲಿ 83.2, ಉಡುಪಿಯಲ್ಲಿ 77.0, ಹೆಬ್ರಿಯಲ್ಲಿ 76.5, ಬ್ರಹ್ಮಾವರದಲ್ಲಿ 65.3, ಕುಂದಾಪುರದಲ್ಲಿ 56.9 ಹಾಗೂ ಬೈಂದೂರಿನಲ್ಲಿ 52.6ಮಿ.ಮೀ. ಮಳೆಯಾದ ವರದಿ ಇಲ್ಲಿನ ನಿಯಂತ್ರಣ ಕೊಠಡಿಗೆ ಬಂದಿದೆ.