×
Ad

ಮಟ್ಕಾ ಜುಗಾರಿ : ಇಬ್ಬರು ವಶಕ್ಕೆ

Update: 2026-07-04 22:40 IST

ಕೋಟ, ಜು.4: ಪಾಂಡೇಶ್ವರ ಗ್ರಾಮದ ಸಾಸ್ತಾನ ಜಂಕ್ಷನ್ ಸಮೀಪ ಜು.3ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಸಾಸ್ತಾನದ ಶಶಿಧರ(30) ಎಂಬಾತನನ್ನು ಕೋಟ ಪೊಲೀಸರು ನಗದು 1065ರೂ. ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹೆಬ್ರಿ: ಹೆಬ್ರಿ ವಿಜಯಲಕ್ಮೀ ಬಾರ್ ಎಂಡ್ ರೆಸ್ಟೊಂರೆಂಟ್‌ನ ಎದುರು ರಸ್ತೆಯ ಬದಿಯಲ್ಲಿ ಜು.2ರಂದು ಮಟ್ಕಾ ಜುಗಾರಿ ಆಟ ನಡೆಸುತ್ತಿದ್ದ ಉಡುಪಿ ಪುತ್ತೂರಿನ ಚೇತನ (24) ಎಂಬಾತನನ್ನು ಹೆಬ್ರಿ ಪೊಲೀಸರು 1,670ರೂ. ನಗದು ಸಹಿತ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News