×
Ad

ಬೈಕ್‌ಗಳ ಮಧ್ಯೆ ಅಪಘಾತ: ಓರ್ವ ಮೃತ್ಯು, ತಂದೆ ಮಗಳು ಗಾಯ

Update: 2026-07-06 21:25 IST

ಗಂಗೊಳ್ಳಿ, ಜು.6: ಎರಡು ಬೈಕ್‌ಗಳ ಮಧ್ಯೆ ಇಂದು ಮಧ್ಯಾಹ್ನ ತ್ರಾಸಿ ಬೀಚ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಮೃತಪಟ್ಟು ಇಬ್ಬರು ಗಾಯಗೊಂಡ ಬಗ್ಗೆ ವರದಿಯಾಗಿದೆ.

ಮೃತರನ್ನು ಬೈಕ್ ಸವಾರ, ಭಟ್ಕಳದ ನಾಗಪ್ಪ ನಾಕ್ ಎಂಬವರ ಮಗ ದೀಪಕ್ ನಾಗಪ್ಪ ನಾಕ್(23) ಎಂದು ಗುರುತಿಸಲಾಗಿದೆ. ಇನ್ನೊಂದು ಬೈಕಿನ ಸವಾರ ಪಡುಕೋಣೆ ಹಡವು ನಿವಾಸಿ ಪೆಟ್ರಿಕ್ ವಾಝ್(63) ಹಾಗೂ ಅವರ ಪುತ್ರಿ ಪ್ಲೆನ್ಸಿಟಾ(24) ಎಂಬವರು ಗಾಯಗೊಂಡಿದ್ದಾರೆ. ಇದರಲ್ಲಿ ಗಂಭೀರ ಸ್ಥಿತಿಯಲ್ಲಿರುವ ಪೆಟ್ರಿಕ್ ವಾಝ್ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂವರನ್ನು ಟೀಮ್ ಎಂಎಚ್‌ಐ ಗಂಗೊಳ್ಳಿ ತುರ್ತು ಸ್ಪಂದನಾ ತಂಡದ ಆಂಬುಲೆನ್ಸ್ ಚಾಲಕ ಇಬ್ರಾಹಿಂ ಗಂಗೊಳ್ಳಿ ಘಟನಾ ಸ್ಥಳದಿಂದ ಕುಂದಾಪುರ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News