ಗುಟ್ಕಾ, ಮಾದಕ ದ್ರವ್ಯ ಜಾಗೃತಿ ಕಾರ್ಯಾಗಾರ

Update: 2026-07-30 19:26 IST

ಕುಂದಾಪುರ, ಜು.30: ಆಧುನಿಕತೆಯ ವೇಗಕ್ಕೆ ತಕ್ಕಂತೆ ವಿದ್ಯಾರ್ಥಿ ಜೀವನ ಬದಲಾವಣೆ ಆಗುತ್ತಿದೆ. ಹಲವು ರೀತಿಯ ಆಮಿಷಗಳಿಗೆ ತುತ್ತಾಗಿ ವಿದ್ಯಾರ್ಥಿಗಳು, ಯುವ ಜನರು ಮಾದಕದ್ರವ್ಯದಂತಹ ದುಷ್ಚಟಕ್ಕೆ ಬಲಿಯಾಗು ತ್ತಿದ್ದಾರೆ. ಇದರಿಂದ ಸಮಾಜದಲ್ಲಿ ವೈಪರಿತ್ಯ ಉಂಟಾಗುತ್ತಿದೆ. ವಿದ್ಯಾರ್ಥಿ ಜೀವನ ದುಶ್ಚಟ ಮುಕ್ತವಾಗಿರಬೇಕಾದರೆ ಇಂತಹ ಕಾರ್ಯಕ್ರಮ ನಿರಂತರ ನಡೆಯಬೇಕೆಂದು ಇಶಾನಿ ಮೆಡಿಕಲ್ ಸೆಂಟರ್‌ನ ವೈದ್ಯಾಧಿಕಾರಿ ಡಾ.ಸೋನಿ ಡಿ ಕೋಸ್ಟ ಹೇಳಿದ್ದಾರೆ.

ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಹಾಗು ನಮ್ಮ ನಾಡ ಒಕ್ಕೂಟ ಕಮ್ಯೂನಿಟಿ ಸೆಂಟರ್ ಕುಂದಾಪುರ ಇವರ ಆಶ್ರಯದಲ್ಲಿ ಸೆಂಟರ್‌ನ ಮಿನಿ ಹಾಲ್‌ನಲ್ಲಿ ಗುಟ್ಕಾ ಹಾಗು ಮಾದಕ ದ್ರವ್ಯಗಳ ಬಗ್ಗೆ ವಿದ್ಯಾರ್ಥಿಗಳು, ಪೋಷ ಕರು ಹಾಗೂ ಯುವ ಜನತೆಗೆ ಆಯೋಜಿಸಲಾದ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡು ತಿದ್ದರು.

ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್‌ನ ಕಾರ್ಯದರ್ಶಿ ಪ್ರದೀಪ್ ಬಂಗೇರ, ಒಕ್ಕೂಟದ ಪ್ರಧಾನ ಕಾರ್ಯ ದರ್ಶಿ ಮೌಲಾನ ಝಮೀರ್ ಅಹ್ಮದ್ ರಶಾದಿ, ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾಝಿಲ್ ಅಹ್ಮದ್, ಉಪಾಧ್ಯಕ್ಷ ಬಿಎಸ್‌ಎಫ್ ರಫೀಕ್ ಗಂಗೊಳ್ಳಿ, ಸದ್ಯಸ್ಯರಾದ ಅಬ್ದುಲ್ ಖಾದರ್ ಮೂಡಗೋಪಾಡಿ, ಮನ್ಸೂರ್ ಇಬ್ರಾಹಿಂ, ಹಾರುನ್ ರಶೀದ್ ಸಾಸ್ತಾನ್, ಕುಂದಾಪುರ ಘಟಕದ ಅಧ್ಯಕ್ಷ ಜಮಾಲ್ ಗುಲ್ವಾಡಿ, ಸದಸ್ಯರಾದ ಝಹೀರ್ ಸಾಸ್ತಾನ ಮೊದಲಾದವರು ಉಪಸ್ಥಿತರಿದ್ದರು.

ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಅಧ್ಯಕ್ಷ ಹುಸೇನ್ ಹೈಕಾಡಿ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಕಮ್ಯುನಿಟಿ ಸೆಂಟರ್‌ನ ಅಧ್ಯಕ್ಷ ಅಬ್ದುಲ್ ಮುನಾಫ್ ಹಂಗಾರಕಟ್ಟೆ ಸ್ವಾಗತಿಸಿದರು. ಅಬು ಮೊಹಮ್ಮದ್ ಕುಂದಾಪುರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News