ಉಡುಪಿ ಅಭಿವೃದ್ಧಿಯ ಬಗ್ಗೆ ಮಾಸ್ಟರ್ ಪ್ಲಾನ್: ಮಂಜುನಾಥ್

Update: 2026-07-30 19:40 IST

ಉಡುಪಿ, ಜು.30: ಭವಿಷ್ಯದ ದೃಷ್ಠಿಯಿಂದ ಉಡುಪಿ ಅಭಿವೃದ್ಧಿಯ ಬಗ್ಗೆ ಮಾಸ್ಟರ್ ಪ್ಲಾನ್ ತಯಾರಿಸಿದ್ದು, ಅದಕ್ಕೆ ಪೂರಕವಾದ ಸೂಕ್ತ ಸಲಹೆ ಸೂಚನೆ ಇಂಜಿನಿಯರ್‌ಗಳು ನೀಡಬೇಕೆಂದು ಉಡುಪಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತ ಮಂಜುನಾಥ್ ಹೇಳಿದ್ದಾರೆ.

ಉಡುಪಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್(ಯುಸಿಇಎ) ವತಿಯಿಂದ ಕಿದಿಯೂರು ಹೊಟೇಲ್‌ನ ಅನಂತ ಶಯನ ಹಾಲ್‌ನಲ್ಲಿ ಬುಧವಾರ ಆಯೋಜಿಸಲಾದ ಎಂಜಿನಿಯರ್ಸ್ ಮೀಟ್ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಪ್ರಸಿದ್ಧಿ ಜತೆಗೆ ವೇಗದ ಪ್ರಗತಿ ಹೊಂದಲು ಎಂಜಿನಿಯರ್‌ಗಳ ಕೊಡುಗೆ ಅಪಾರ. ರಸ್ತೆ, ಕಟ್ಟಡಗಳ ನಿರ್ಮಾಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಶ್ಲಾಘನೀಯ. ಉಡುಪಿ ನಗರದ ಸೌಂದರ್ಯ ಹೆಚ್ಚಳಕ್ಕೂ ಎಂಜಿನಿಯರ್ ಗಳು ಕೈಜೋಡಿಸಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಇತ್ತೀಚಿಗೆ ನಿರ್ಮಾಣಗೊಂಡ ಅಭಿನಯ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಸಂಸ್ಥೆಯ ವತಿಯಿಂದ ಕಥೆ ನಿರೂಪಕ ನಿರ್ದೇಶಕ ಗಣೇಶ್ ಕಾಂಡ್ಲೂರು ಅವರನ್ನು ಗೌರವಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಕೆ.ರಂಜನ್ ಸ್ವಾಗತಿಸಿದರು. ಉಪಾಧ್ಯಕ್ಷರಾದ ಗಣೇಶ್ ಬೈಲೂರು, ಭರತ್ ಭೂಷಣ್, ಪ್ರಧಾನ ಕಾರ್ಯದರ್ಶಿ ಕೆ.ಹರೀಶ್ ಕುಮಾರ್ ನಿರೂಪಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News