ಸ್ಪಿರಿಟ್ ಆಫ್ ಯೂಥ್ ಡ್ಯಾನ್ಸ್- ಮ್ಯೂಸಿಕ್ ಫೆಸ್ಟಿವಲ್‌ನಲ್ಲಿ ಯುಕ್ತಿ ನೃತ್ಯ ಪ್ರದರ್ಶನ

Update: 2026-08-09 18:45 IST

ಕುಂದಾಪುರ: ಮ್ಯೂಸಿಕ್ ಅಕಾಡೆಮಿ ಮೆಡ್ರಾಸ್(ಚೆನ್ನೈ) ಇವರು ಆಯೋಜಿಸಿದ 2026ರ ಸ್ಪಿರಿಟ್ ಆಫ್ ಯೂಥ್ ಡ್ಯಾನ್ಸ್ ಮತ್ತು ಮ್ಯೂಸಿಕ್ ಫೆಸ್ಟಿವಲ್‌ಗೆ ಯುಕ್ತಿ ಉಡುಪ ಬಳ್ಕೂರು ಆಯ್ಕೆಯಾಗಿ ಭರತನಾಟ್ಯ ಪ್ರದರ್ಶನ ನೀಡಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ 10 ಜನ ಭರತನಾಟ್ಯ ಕಲಾವಿದರು ಆಯ್ಕೆಯಾಗಿ ಭರತನಾಟ್ಯ ಪ್ರದರ್ಶನ ನೀಡಿದ ಈ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಕಲಾವಿದೆಯಾಗಿದ್ದಾಳೆ. ಆ.4ರಂದು ಮ್ಯೂಸಿಕ್ ಅಕಾಡೆಮಿ ಮೆಡ್ರಾಸ್‌ನ ಕಸ್ತೂರಿ ಶ್ರೀನಿವಾಸನ್ ಹಾಲ್‌ನಲ್ಲಿ ಈ ಕಾರ್ಯಕ್ರಮ ನಡೆಯಿತು.

ನಟುವಾಂಗ ಹಾಗೂ ನೃತ್ಯ ಸಂಯೋಜನೆಯಲ್ಲಿ ಗುರು ವಿದುಷಿ ಪ್ರವಿತ ಅಶೋಕ್, ಹಾಡುಗಾರಿಕೆಯಲ್ಲಿ ವಿನೀತ್ ಪುರುವಂಕರ್, ಮೃದಂಗದಲ್ಲಿ ವಿದ್ಯಾಶಂಕರ್, ವೀಣೆಯಲ್ಲಿ ಅನಂತನಾರಾಯಣನ್ ಹಾಗೂ ವಯೊಲಿನ್ ನಲ್ಲಿ ಸುಕನ್ಯ ಸಹಕರಿಸಿದರು. ಕುಂದಾಪುರದ ನೃತ್ಯ ವಸಂತ ನಾಟ್ಯಾಲಯದ ವಿದುಷಿ ಪ್ರವಿತ ಅಶೋಕ್ ಅವರ ಶಿಷ್ಯೆಯಾಗಿರುವ ಯುಕ್ತಿ ಉಡುಪ, ಬಳ್ಕೂರಿನ ರಾಘವ ಉಡುಪ ಮತ್ತು ಶ್ರೀಕಾಂತಿ ಉಡುಪ ದಂಪತಿ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News