ಉಡುಪಿ: ಮಹಿಳೆಯರ ಆಟಿದ ಕೂಟ
ಉಡುಪಿ, ಆ.10: ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೊಟ, ಬಡಗುಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸಹಯೋಗ ದೊಂದಿಗೆ ಮಹಿಳೆಯರ ಆಟಿದ ಕೂಟವನ್ನು ಸೋಮವಾರ ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉಡುಪಿ ಶಾಸಕ ಯಶಪಾಲ್ ಸುವರ್ಣ ಉದ್ಘಾಟಿಸಿದರು. ಬಡಗುಬೆಟ್ಟಿನ ಸೊಸೈಟಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಶುಭ ಹಾರೈಸಿದರು. ಉಪಾಧ್ಯಕ್ಷೆ ಗೀತಾ ವಾಗ್ಲೆ ಬಂಟಕಲ್ ನಮ್ಮ ಪರಿಸರದಲ್ಲಿ ದೊರೆ ಯುವ ಸಸ್ಯಗಳ ಪರಿಚಯ ಹಾಗೂ ಆಟಿದ ಊಟ, ತಿನಿಸುಗಳಲ್ಲಿ ಅಡಗಿರುವ ಔಷಧಿ ಗುಣ ಹಾಗೂ ಮಹತ್ವದ ಬಗ್ಗೆ ತಿಳಿಸಿದರು.
ಜಿಲ್ಲಾ ಒಕ್ಕೂಟದ ಗೌರವಾಧ್ಯಕ್ಷೆ ಶೀಲಾ ಶೆಟ್ಟಿ, ಒಕ್ಕೊಟದ ಪಧಾದಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು. ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಪದ್ಮಾ ರತ್ನಾಕರ್ ಸ್ವಾಗತಿದರು. ಜ್ಯೋತಿ ರಾವ್ ಹಾಗೂ ರೇವತಿ ಕಾರ್ಯಕ್ರಮ ನಿರೂಪಿಸಿದರು. ಸಹಾಯ ಮೇರಿ ವಂದಿಸಿದರು. ವಿವಿಧ ಮಹಿಳಾ ತಂಡದವರಿಂದ ಮನೋರಂಜನಾ ಕಾರ್ಯಕ್ರಮ ಜರಗಿತು. ನೂರಾರು ಮಹಿಳೆಯರು ಆಟಿದ ಭೋಜನ ಸವಿದರು.