ಬಾವಿಗೆ ಬಿದ್ದು ಕೃಷಿಕ ಮೃತ್ಯು
Update: 2026-08-22 20:50 IST
ಶಂಕರನಾರಾಯಣ, ಆ.22: ಕೃಷಿಕರೊಬ್ಬರು ಅಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ಆ.20ರಂದು ರಾತ್ರಿ ವೇಳೆ ಹಾಲಾಡಿ 76 ಗ್ರಾಮದ ಕೊಡ್ಗಿಮನೆ ಮುದುವೇರಿ ಎಂಬಲ್ಲಿ ನಡೆದಿದೆ.
ಮೃತರನ್ನು ಮುದುವೇರಿ ನಿವಾಸಿ ಕೃಷ್ಣ(44) ಎಂದು ಗುರುತಿಸಲಾಗಿದೆ. ಕೃಷಿ ತೋಟಕ್ಕೆ ಬಂದ ಕಾಡು ಪ್ರಾಣಿಯನ್ನು ಓಡಿಸಲು ಹೋದ ಇವರು, ಮನೆಯ ಸಮೀಪದ ಬಾವಿಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.