ಹೂಡೆ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆ
ಉಡುಪಿ, ಸೆ.7: ತೋನ್ಸೆ ಹೂಡೆಯ ಸಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನವನ್ನು ಇತ್ತೀಚೆಗೆ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ದಕ್ಷಿಣ ಮಹಿಳಾ ವಿಭಾಗದ ಸಂಚಾಲಕಿ ಸುಮಯ್ಯ ಹುೀದುಲ್ಲಾಹ್ ಮಾತನಾಡಿ, ’ಶಿಕ್ಷಕ ಪಠ್ಯ ಪುಸ್ತಕದಲ್ಲಿರುವ ಷಯಗಳನ್ನು ಬೋಧಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳಲ್ಲಿ ನೈತಿಕತೆ ಬೆಳೆಸಲು ಪೂರಕವಾದ ವಿಚಾರಗಳನ್ನು ಅಧ್ಯಯನದ ಸಂದರ್ಭಗಳಲ್ಲಿ ಬೋಧಿಸಬೇಕು. ಆಗ ಮಾತ್ರ ಶಿಕ್ಷಣದ ಉದ್ದೇಶ ಈಡೇರುತ್ತದೆ’ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಾಲಿಹಾತ್ ಶಿಕ್ಷಣ ಸಂಸ್ಥೆಯಲ್ಲಿ ಬಹಳ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಶಿಕ್ಷಕಿ ಸುರಯ್ಯ ಬಾನು ಹಾಗೂ ಬೋಧಕೇತರ ಸಿಬ್ಬಂದಿ ಝಿನತ್ ಬಾನು ಅವರನ್ನು ಸನ್ಮಾನಿಸಲಾಯಿತು. ಸ್ಥಳೀಯ ಶಿಕ್ಷಕಿ ಸಹದೇವಿ ಅವರನ್ನು ಗೌರವಿಸಲಾಯಿತು. ಅಧ್ಯಕ್ಷತೆಯನ್ನು ಶಿಕ್ಷಣ ಸಂಸ್ಥೆಯ ಹಿರಿಯ ಟ್ರಸ್ಟಿ ಹುಸೇನ್ ಮಾಸ್ಟರ್ ವಹಿಸಿದ್ದರು.
ವೇದಿಕೆಯಲ್ಲಿ ಪ್ರಾಂಶುಪಾಲೆ ದಿವ್ಯ ಪೈ, ಅಕಾಡೆಮಿಕ್ ಹೆಡ್ ಅಬ್ದುಲ್ ಹಸೀಬ್ ತರಫ್ದರ್, ಮುಖ್ಯ ಶಿಕ್ಷಕಿಯರಾದ ಸುನಂದ, ಯಾಸ್ಮೀನ್, ಸುನೈನ, ಇಸ್ಲಾಮಿಕ್ ಸ್ಟಡಿಸ್‌ನ ಮುಖ್ಯಸ್ಥ ಶಾಹಿದ್ ನದ್ವಿ ಹಾಗೂ ತಸ್ನೀಮ್ ಕೆ ಮುಂತಾದವರು ಉಪಸ್ಥಿರಿದ್ದರು. ನಂತರ ಶಿಕ್ಷಕರಿಗಾಗಿ ವಿಧ ಸಾಂಸ್ಕ್ರತಿಕ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು.
ಸಂಸ್ಥೆಯ ಆಡಳಿತಾಧಿಕಾರಿ ಅಸ್ಲಾಂ ಹೈಕಾಡಿ ಪ್ರಾಸ್ತಾಕ ಮಾತನ್ನಾಡಿದರು. ಪ್ರಾಂಶುಪಾಲೆ ಡಾ. ಶಬಿನಾ ಅಬ್ದುಲ್ ಗಫ್ಫರ್ ಸ್ವಾಗತಿಸಿ, ಉಪನ್ಯಾಸಕಿ ಸುಧಾ ಹಾಗೂ ಶಬಾನ ಮುಮ್ತಾಜ್ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕಿ ಲಕ್ಷ್ಮೀ ಹೆಗ್ಡೆ ವಂದಿಸಿದರು.