ಅನಾರೋಗ್ಯ ಪೀಡಿತರಿಗೆ, ಹಿರಿಯ ಕಲಾವಿದರಿಗೆ, ರುದ್ರಭೂಮಿ ನೌಕರರಿಗೆ ಸಹಾಯಹಸ್ತ
ಉಡುಪಿ, ಅ.3: ಉದ್ಯಮಿ ಡಾ.ಜಿ.ಶಂಕರ್ ಅವರ 71ನೇ ಹುಟ್ಟುಹಬ್ಬದ ಪ್ರಯುಕ್ತ ಉಡುಪಿ, ದಕ್ಷಿಣ ಕನ್ನಡ ಹಾಗೂ ಇತರೆ ಜಿಲ್ಲೆಗಳಲ್ಲಿರುವ ಆಯ್ದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್, ಕಿಡ್ನಿ ಹಾಗೂ ಹೃದ್ರೋಗಿಗಳಿಗೆ, ವಿಶೇಷ ಶಾಲೆಗಳಿಗೆ, ಹಿರಿಯ ಹಾಗೂ ನುರಿತ ಯಕ್ಷಗಾನ ಕಲಾವಿದರಿಗೆ, ಸಾರ್ವಜನಿಕ ರುದ್ರಭೂಮಿಗಳಲ್ಲಿ ಶವ ಸಂಸ್ಕಾರ ಕೆಲಸ ಕಾರ್ಯಗಳಿಗೆ ತೊಡಗಿರುವ ಬಂಧುಗಳಿಗೆ ಸಹಾಯಧನ ವಿತರಿಸಲಾಗಿದೆ.
ಕೆಎಂಸಿ ಮಣಿಪಾಲ 145 ಕ್ಯಾನ್ಸರ್ ರೋಗಿಗಳು ಹಾಗೂ 28 ಕಿಡ್ನಿ ರೋಗಿ ಮತ್ತು ಹೃದ್ರೋಗಿಗಳಿಗೆ, ಕೆಎಂಸಿ ಅತ್ತಾವರ-ಮಂಗಳೂರು 53 ಕ್ಯಾನ್ಸರ್ ಹಾಗೂ 46 ಕಿಡ್ನಿ, ಕೆಎಂಸಿ ಮಂಗಳೂರು ಜ್ಯೋತಿ 17 ಕ್ಯಾನ್ಸರ್ ಹಾಗೂ 50 ಕಿಡ್ನಿ, ಫಾದರ್ ಮುಲ್ಲರ್ ಮಂಗಳೂರು 76 ಕ್ಯಾನ್ಸರ್ ಹಾಗೂ 19 ಕಿಡ್ನಿ, ವೆನ್ಲಾಕ್ ಆಸ್ಪತ್ರೆ ಮಂಗಳೂರು 45 ಕ್ಯಾನ್ಸರ್ ಹಾಗೂ 35 ಕಿಡ್ನಿ, ಎಂಐಓ ಮಂಗಳೂರು 24 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಮಂಗಳೂರು 11 ಕ್ಯಾನ್ಸರ್ ಹಾಗೂ 2 ಕಿಡ್ನಿ, ಆದರ್ಶ ಆಸ್ಪತ್ರೆ ಉಡುಪಿ 17 ಕ್ಯಾನ್ಸರ್ ಹಾಗೂ 29 ಕಿಡ್ನಿ, ಗಾಂಧಿ ಆಸ್ಪತ್ರೆ ಉಡುಪಿ 6 ಕ್ಯಾನ್ಸರ್, ಸರಕಾರಿ ಆಸ್ಪತ್ರೆ ಕುಂದಾಪುರ 11 ಕ್ಯಾನ್ಸರ್ ಹಾಗೂ 5 ಕಿಡ್ನಿ, ಸರಕಾರಿ ಆಸ್ಪತ್ರೆ ಬ್ರಹ್ಮಾವರ 10 ಕಿಡ್ನಿ, ಇತರೆ 7 ಕ್ಯಾನ್ಸರ್ ಸೇರಿದಂತೆ ಒಟ್ಟು 412 ಕ್ಯಾನ್ಸರ್ ರೋಗಿಗಳು ಹಾಗೂ 224 ಕಿಡ್ನಿ ಸಮಸ್ಯೆ ಬಾತರಿಗೆ ಸಹಾಯಹಸ್ತವನ್ನು ನೀಡಲಾಗಿದೆ.
ಉಭಯ ಜಿಲ್ಲೆಗಳ ಹಿರಿಯ ಯಕ್ಷಗಾನ ಕಲಾವಿದರಾಗಿರುವ 89 ಮಂದಿಗೆ, ಉಭಯ ಜಿಲ್ಲೆಗಳ ವಿಶೇಷ ಶಾಲೆ(31) ಹಾಗೂ ರುದ್ರಭೂಮಿ ಯಲ್ಲಿ ದಿನಂಪ್ರತಿ ಶವ ಸಂಸ್ಕಾರದಲ್ಲಿ ತೊಡಗಿರುವ ಬಂಧುಗಳಿಗೆ ಸಹಾಯ ಹಸ್ತವನ್ನು ನೀಡಲಾಗಿದೆ.
ಕ್ಯಾನ್ಸರ್, ಕಿಡ್ನಿ, ವಿಶೇಷ ಶಾಲೆ ಹಾಗೂ ರುದ್ರಭೂಮಿ ನೌಕರರಿಗೆ ತಲಾ 25,000ರೂ. ನಂತೆ ಹಾಗೂ ಯಕ್ಷಗಾನ ಕಲಾವಿದರಿಗೆ ತಲಾ 10,000 ರೂ.ನಂತೆ ಅವರವರ ಬ್ಯಾಂಕ್ ಖಾತೆಗಳಿಗೆ ಈಗಾಗಲೇ ನೇರ ಜಮೆ ಮಾಡಲಾಗಿದೆ ಎಂದು ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಉಡುಪಿ ಪ್ರಕಟಣೆ ತಿಳಿಸಿದೆ.