ದುರ್ಗಾ ಹೊಳೆಯಲ್ಲಿ ಅಪರಿಚಿತ ಮೃತದೇಹ ಪತ್ತೆ
ಕಾರ್ಕಳ, ಅ.3: ದುರ್ಗಾ ಗ್ರಾಮದ ತೆಳ್ಳಾರು ಪಲಾಯಿ ಬಾಕ್ಯಾರು ಓಡದ ಕರಿಯ ಎಂಬಲ್ಲಿ ಹರಿಯುತ್ತಿರುವ ದುರ್ಗಾ ತೆಳ್ಳಾರು ಹೊಳೆಯ ಬಳಿ ಸುಮಾರು ಅಂದಾಜು 60 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಅ.2ರಂದು ಮಧ್ಯಾಹ್ನ ವೇಳೆ ಪತ್ತೆಯಾಗಿದೆ.
ಯಾರೋ ಎಲ್ಲಿಯೋ ಆಕಸ್ಮಿಕವಾಗಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಅಥವಾ ಬೇರೆ ಯಾವುದೋ ಕಾರಣದಿಂದ ಮೃತಪಟ್ಟಿರಬಹುದು. ವ್ಯಕ್ತಿ ಮೃತಪಟ್ಟು ಸುಮಾರು ಒಂದು ವಾರಗಳ ಕಾಲ ಆಗಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.