ಹಿರೇಬೆಟ್ಟು ದೇವಸ್ಥಾನದ ಸುತ್ತುಪೌಳಿ ಕಾಮಗಾರಿಗೆ ಶಿಲಾಮುಹೂರ್ತ
ಉಡುಪಿ, ಅ.3: ಭಟ್ರಕೋಡಿ-ಹಿರೇಬೆಟ್ಟಿನ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರದ ಅಂಗವಾಗಿ ಕೈಗೆತ್ತಿಕೊಳ್ಳಲಾಗಿರುವ ಸುತ್ತುಪೌಳಿ ಕಾಮಗಾರಿಯ ಪ್ರಾರಂಭ ಹಾಗೂ ಶಿಲಾ ಮುಹೂರ್ತ ಕಾರ್ಯಕ್ರಮವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಕ್ಷೇತ್ರದ ತಂತ್ರಿವರ್ಯರಾದ ಡಾ.ಸತ್ಯಕೃಷ್ಣ ಭಟ್ ಮಂಗಳೂರು ನೇತೃತ್ವದಲ್ಲಿ ವೈದಿಕ ವಿಧಿವಿಧಾನಗಳು ನೆರವೇರಿ ದವು. ಕಾರ್ಯಕ್ರಮದ ಅಂಗವಾಗಿ ಭ್ರಮರಾಂಬಿಕಾ ಮಹಿಳಾ ಭಜನಾ ಮಂಡಳಿ, ಕಬ್ಯಾಡಿ ಹಾಗೂ ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನ, ಪರ್ಕಳ ಇವರಿಂದ ಭಜನಾ ಸೇವೆ ನಡೆಯಿತು.
ಇದೇ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರದ ಯೋಜಿತ ವಿನ್ಯಾಸ ಹಾಗೂ ನಿರ್ಮಾಣದ ಸ್ವರೂಪವನ್ನು ಪರಿಚಯಿಸುವ ವಾಕ್ ಥ್ರೂ ವೀಡಿಯೊವನ್ನು ಡಾ.ಸತ್ಯಕೃಷ್ಣ ಭಟ್ ಅನಾವರಣಗೊಳಿಸಿದರು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ವಿ.ನಾಯಕ್, ಖಜಾಂಚಿ ಚಂದ್ರಶೇಖರ ನಾಯಕ್ ಹಾಗೂ ಸಮಿತಿಯ ಪ್ರಮುಖರಾದ ಜಯಪ್ರಕಾಶ್ ನಾಯಕ್, ಗುರುದಾಸ್ ಭಂಡಾರಿ, ಸೀತಾರಂ ಭಟ್, ಉಮೇಶ್ ಭಟ್, ದಿನೇಶ್ ಪ್ರಭು, ನಾರಾಯಣ ಪೂಜಾರಿ, ಉಮೇಶ್ ನಾಯಕ್, ವಸಂತರಾಯ ಪ್ರಭು, ಶೈಲೇಶ್, ಅಶೋಕ್ ನಾಯಕ್, ರಾಜೇಶ್ ಭಟ್, ಕಾಳಿದಾಸ ಭಂಡಾರಿ, ಶಂರ್ಕ ನಾಯಕ್, ಶ್ರೀಧರ್ ನಾಯ್ಕ್, ಸುರೇಶ್ ನಾಯ್ಕ್, ಲಕ್ಷ್ಮೀಶ್ ಭಟ್, ಸುಧಾರ್ಕ ಆಚಾರ್ಯ, ಶಾಮ್ ನಾಯ್ಕ್, ಗಣಪತಿ ಕಾಮತ್, ಕೃಷ್ಣ ನಾಯ್ಕ್, ಶ್ರೀಪತಿ ಭಟ್, ಕೇಶವ ಭಂಡಾರಿ, ಹರೀಶ್ ಶೆಟ್ಟಿ, ಶರತ್ ಹೆಗ್ಡೆ, ಮುರಳಿರ್ಧ ಲಾಗ್ವಾರ್ಕ, ಸುಧಾರ್ಕ ಲಾಗ್ವಾರ್ಕ, ಅಶೋಕ್ ಲಾಗ್ವಾರ್ಕ, ಮಣಿಕಂಠ ಭಟ್, ಶ್ರೀರ್ಧ ಭಟ್, ಬಾಲಕೃಷ್ಣ ಭಟ್, ವಿಕ್ರಂ ಭಟ್, ಸುರ್ಧೀ ಪೂಜಾರಿ ಹಾಗೂ ಮಹೇಶ್ ಪುತ್ರನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.