ಅಂಚೆ ಜೀವ ವಿಮೆ/ಗ್ರಾಮೀಣ ಅಂಚೆ ಜೀವವಿಮೆ ವಹಿವಾಟು ತಾತ್ಕಾಲಿಕ ಸ್ಥಗಿತ
ಉಡುಪಿ, ಅ.31: ಅಂಚೆ ಜೀವವಿಮೆ ಮತ್ತು ಗ್ರಾಮೀಣ ಅಂಚೆ ಜೀವ ವಿಮೆ ಈಗಿನ ಪ್ರಸಕ್ತ ತಂತ್ರಾಂಶದಿಂದ ಹೊಸ ತಂತ್ರಾಂಶಕ್ಕೆ ಬದಲಾಗುವ ಹಿನ್ನೆಲೆಯಲ್ಲಿ ನವೆಂಬರ್ 4ರಿಂದ 7ರವರೆಗೆ ಜೀವವಿಮೆಗೆ ಸಂಬಂಧಪಟ್ಟ ಯಾವುದೇ ವ್ಯವಹಾರಗಳು ಅಂಚೆ ಕಚೇರಿಗಳಲ್ಲಿ ಇರುವುದಿಲ್ಲ. ನ.9ರಿಂದ ಎಲ್ಲಾ ಸೇವೆಗಳು ಲಭ್ಯವಿರಲಿದ್ದು, ಗ್ರಾಹಕರು ಸಹಕರಿಸುವಂತೆ ಉಡುಪಿ ಅಂಚೆ ವಿಭಾಗದ ಅಂಚೆ ಅಧೀಕ್ಷಕರ ಕಚೇರಿ ಪ್ರಕಟಣೆ ತಿಳಿಸಿದೆ.