×
Ad

ಉಡುಪಿ: ಜೂ.15ರಂದು ನೇತ್ರದಾನ ನೊಂದಣಿ, ಅರಿವು ಶಿಬಿರ

Update: 2025-06-14 21:55 IST

ಉಡುಪಿ, ಜೂ.14: ಕಾಂಗ್ರೆಸ್ ನಾಯಕ ಉದ್ಯಮಿ ಪ್ರಸಾದ್‌ರಾಜ್ ಕಾಂಚನ್ ಇವರ ಹುಟ್ಟುಹಬ್ಬದ ಪ್ರಯುಕ್ತ ಜೂ.15ರಂದು ನೇತ್ರದಾನ ನೊಂದಣಿ ಹಾಗೂ ಅರಿವು ಶಿಬಿರ ನಡೆಯಲಿದೆ ಎಂದು ಉಡುಪಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಸಜ್ಜನ್ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗ್ಠೊಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9 ಗಂಟೆಗೆ ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ, ಉಡುಪಿ ಕ್ಲಾಕ್‌ಟವರ್ ಬಳಿ, ಮಣಿಪಾಲದ ಕೆನರಾ ಮಾಲ್‌ನಲ್ಲಿ ಹಾಗೂ ಬ್ರಹ್ಮಾವರ ಬಸ್ ನಿಲ್ದಾಣದ ಸಮೀಪ ಉಡುಪಿ ಪ್ರಸಾದ್ ನೇತ್ರಾಲಯದ ಸಹಯೋಗದಲ್ಲಿ ನೇತ್ರದಾನ ನೊಂದಣಿ ಹಾಗೂ ಅರಿವು ಶಿಬಿರ ನಡೆಯಲಿದೆ ಎಂದರು.

ಕಾಂಗ್ರೆಸ್ ಭವನದಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಪ್ರಸಾದ್‌ರಾಜ್ ಕಾಂಚನ್ ಹುಟ್ಟುಹಬ್ಬದ ಪ್ರಯುಕ್ತ ಇನ್ನೂ ಅನೇಕ ಕಾರ್ಯಕ್ರಮಗಳು ನಗರದಲ್ಲಿ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಯುವ ಕಾಂಗ್ರೆಸ್‌ನ ಸುದೇಶ್ ಶೆಟ್ಟಿ, ಶರತ್ ಕುಂದರ್, ಶ್ರೇಯಾ ಪೂಜಾರಿ, ಸಂದೇಶ್ ಕಡೆಕಾರು, ಸುವಿಚ್ ಮೂಡುಬೆಟ್ಟು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News