×
Ad

ಜ. 18ರಂದು ಕಾರ್ಕಳಕ್ಕೆ ರಾಜ್ಯಪಾಲರು ಭೇಟಿ

Update: 2024-01-16 20:22 IST

ಉಡುಪಿ, ಜ.16: ಕರ್ನಾಟಕದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಜ.18ರಂದು ಕಾರ್ಕಳಕ್ಕೆ ಭೇಟಿ ನೀಡಲಿದ್ದು, ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಬೆಳಗ್ಗೆ 10:45ಕ್ಕೆ ಬೆಂಗಳೂರಿನಿಂದ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸುವ ರಾಜ್ಯಪಾಲರು ಅಲ್ಲಿಂದ 12:15ಕ್ಕೆ ಕಾರ್ಕಳ ಪ್ರವಾಸಿ ಮಂದಿರಕ್ಕೆ ಆಗಮಿಸುವರು. ಅಪರಾಹ್ನ 1:00ಗಂಟೆಗೆ ಕಾರ್ಕಳ ಶಾಸಕ ವಿ.ಸುನಿಲ್ ಕುಮಾರ್ ಮನೆಗೆ ಭೇಟಿ ನೀಡುವರು.

ಸಂಜೆ 4:00 ಗಂಟೆಗೆ ಕಾರ್ಕಳದ ಆನೆಕೆರೆ ಬಸದಿಗೆ ಆಗಮಿಸುವ ರಾಜ್ಯಪಾಲರು, ಅಲ್ಲಿ ಪಂಚಕಲ್ಯಾಣ ಹಬ್ಬ ಹಾಗೂ ನವೀಕೃತ ಜೈನ ಬಸದಿಯನ್ನು ಉದ್ಘಾಟಿಸಿ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. 6:30ಕ್ಕೆ ಕಾರ್ಕಳದಿಂದ ಹೊರಟು ಮಂಗಳೂರು ಮೂಲಕ ಬೆಂಗಳೂರಿಗೆ ನಿರ್ಗಮಿಸುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News