×
Ad

ಕೋಟ: ಮಹಿಳೆಗೆ 18.64 ಲಕ್ಷ ರೂ. ಆನ್‌ಲೈನ್ ವಂಚನೆ

Update: 2024-06-27 22:06 IST

ಕೋಟ, ಜೂ.27: ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಡೆಯಬಹುದೆನ್ನುವ ಆಮಿಷಕ್ಕೆ ಬಲಿ ಬಿದ್ದ ಮಹಿಳೆಯೊಬ್ಬರು 18.64 ಲಕ್ಷ ರೂ.ಗಳ ವಂಚನೆಗೊಳಗಾರಿರುವ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ದೊಡ್ಡ ಮೊತ್ತದ ಹಣದ ವಂಚನೆಗೊಳಗಾಗಿರುವ ಸೌಮ್ಯ ಎಂಬವರು ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಿಸಿ ದ್ದಾರೆ. ಕಳೆದ ಫೆ.12ರಂದು ಅಪರಿಚಿತ ಯುವತಿಯೊಬ್ಬರು ವಾಟ್ಸ್‌ಅಪ್ ಮೂಲಕ ಪರಿಚಯವಾಗಿ ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡುವುದರಿಂದ ದೊಡ್ಡ ಮೊತ್ತದ ಲಾಭ ಪಡೆಯಬಹುದೆಂದು ನಂಬಿಸಿದ್ದರು.

ಇವರ ಮಾತನ್ನು ನಂಬಿದ ಸೌಮ್ಯ, ತನ್ನೆಲ್ಲಾ ದಾಖಲೆಗಳನನು ನೀಡಿ ಅದೇ ದಿನ 50ಸಾವಿರ ಹಾಗೂ ಮಾ.28ರಂದು 60ಸಾವಿರ ಹಣ ಹೂಡಿಕೆ ಮಾಡಿದ್ದಾರೆ. ಆರೋಪಿಗಳು 3000ರೂ.ವನ್ನು ಸೌಮ್ಯರ ಖಾತೆಗೆ ಹಾಕಿದ್ದು, ಆ ಬಳಿಕ ಇನ್ನೂ ಹೆಚ್ಚು ಹೂಡಿಕೆ ಮಾಡುವಂತೆ ಒಟ್ಟರೆಯಾಗಿ ತಾನು 18,64,500ರೂ.ಗಳನ್ನು ವಿವಿಧ ಲಿಂಕ್ ಮೂಲಕ ಕಳುಹಿಸಿದ್ದಾಗಿ ತಿಳಿಸಿದ್ದಾರೆ. ಮೇ 25ರ ನಂತರ ಗ್ರೂಫ್ ನಿಷ್ಕೃಿಯಗೊಂಡಿದ್ದು ಆ ಬಳಿಕ ಯಾವುದೇ ಸಂಪರ್ಕ ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ. ಇದೀಗ ದೂರು ದಾಖಲಿಸಿಕೊಂಡಿರುವ ಕೋಟ ಪೊಲೀಸರು ತನಿಖೆ ನಡೆಸುತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News