ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ 'ಕಲರವ-2023': ಕಾರ್ಕಳ ಪ್ರಥಮ.
ಕಾರ್ಕಳ, ನ.9: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ ಮಂಗಳೂರು ವಲಯದ ವತಿಯಿಂದ ನ.7ರಂದು ಮಂಗಳೂರಿನ ಪುರಭವನದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ "ಕಲರವ 2023'ರಲ್ಲಿ ಕಾರ್ಕಳ ವಲಯ ಪ್ರಥಮ ಸ್ಥಾನ ಗಳಿಸಿದೆ. ಮುಲ್ಕಿ ವಲಯ ದ್ವಿತೀಯ ಹಾಗೂ ಉಳ್ಳಾಲ ವಲಯ ತೃತೀಯ ಸ್ಥಾನ ಪಡೆದುಕೊಂಡಿವೆ.
ಕಾಪು ವಲಯ ವಿಶೇಷ ಬಹುಮಾನಕ್ಕೆ ಭಾಜನವಾಗಿದೆ. ಸ್ಪರ್ಧೆಯಲ್ಲಿ ಒಟ್ಟು 13 ವಲಯಗಳು ಭಾಗವಹಿಸಿದ್ದು, ಕಾರ್ಕಳ ವಲಯವು ಕರಾಟೆ, ತಾಲೀಮು, ಜಾನಪದ ನೃತ್ಯ, ಹಾಸ್ಯ ನೃತ್ಯ, ಪ್ರಹಸನ ಸೇರಿದಂತೆ 9 ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಾದರಪಡಿಸಿದೆ. ಚಂದ್ರನಾಥ ಬಜಗೋಳಿ ನಿರ್ದೇಶನದ ಈ ಕಾರ್ಯಕ್ರಮವನ್ನು ಪ್ರಸಾದ್ ಐಸಿರ ನಿರೂಪಿಸಿದರು.
ಕಾರ್ಕಳ ವಲಯ ಅಧ್ಯಕ್ಷ ಟಿ.ವಿ.ಸುಶೀಲ್ ಕುಮಾರ್, ಕಾರ್ಯದರ್ಶಿ ಪ್ರಸನ್ನ ಹೆಗ್ಡೆ ಪ್ರಶಸ್ತಿ ಸ್ವೀಕರಿಸಿದರು.
ಎಸ್ ಕೆಪಿಎ ಜಿಲ್ಲಾಧ್ಯಕ್ಷ ಪದ್ಮಪ್ರಸಾದ್ ಜೈನ್, ಮಾಜಿ ಅಧ್ಯಕ್ಷ ಆನಂದ ಎನ್. ಬಂಟ್ವಾಳ, ಮಂಗಳೂರು ವಲಯದ ಅಧ್ಯಕ್ಷ ಹರೀಶ್ ಅಡ್ಯಾರ್, ಕಾರ್ಕಳ ವಲಯ ಸಾಂಸ್ಕೃತಿಕ ಕಾರ್ಯದರ್ಶಿ ಪ್ರಶಾಂತ್ ಬಜಗೋಳಿ, ವಲಯದ ಪೂರ್ವಾಧ್ಯಕ್ಷರು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.