×
Ad

ಮನೋಹರ್ ಆವಿಷ್ಕಾರದ ಬೈನಾಕುಲರ್ ಮತ್ತೆ 3 ದಾಖಲೆ

Update: 2025-02-11 18:21 IST

ಮಣಿಪಾಲ, ಫೆ.11: ಪರ್ಕಳ ನಿವಾಸಿ ಆರ್.ಮನೋಹರ್ ಆವಿಷ್ಕೃತ ಬೈನಾಕುಲಾರ್‌ಗೆ ಮತ್ತೆ ಮೂರು ದಾಖಲೆ ಪ್ರಶಸ್ತಿ ದೊರೆತಿದೆ.

ಸುಮಾರು 200ಎಕ್ಸ್ 240 ಎಕ್ಸ್ ವಿಸ್ತರಣೆಗೊಳ್ಳುವ ಮತ್ತು ಎರಡು ಕಣ್ಣುಗಳಿಂದ ಆಕಾಶಕಾಯಗಳನ್ನು ಬಲು ಹತ್ತಿರದಲ್ಲಿ ಮತ್ತು ನೇರವಾಗಿ ಕಾಣುವಂತೆ ಆವಿಸ್ಕರಿಸಿದ ಬೈನಾಕುಲರ್ ವಿಶ್ವದಲ್ಲಿ ಮಾನ್ಯತೆ ಪಡೆದ ಆರು ಸಂಸ್ಥೆಗಳಿಂದ ಪ್ರಶಸ್ತಿಯ ಸರಮಾಲೆ ಬಾಚಿಕೊಂಡಿತ್ತು.

ಇದೀಗ ಈ ಬೈನಾಕುಲಾರ್ ಮತ್ತೆ ಮೂರು ಐಎಸ್‌ಓ ಮಾನ್ಯತೆ ಪಡೆದ ಸಂಸ್ಥೆಗಳಿಂದ ನೀಡುವ ಪ್ರೆಸ್ಟೀಜಿಯಸ್ಸ್ ಬುಕ್ ಆಫ್ ರೆಕಾರ್ಡ್, ಕಿಂಗ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್, ಎಕ್ಸ್ ಕ್ಲೂಸ್ ವಲ್ಡ್ ರೆಕಾರ್ಡ್ ಪ್ರಶಸ್ತಿಯನ್ನು ಪಡೆದು ಕೊಂಡಿದೆ. ಈ ಮೂಲಕ ಮನೋಹರ್ ಅವರ ಬೈನಾಕುಲರ್ ಒಟ್ಟು ಒಂಭತ್ತು ವಿಶ್ವ ದಾಖಲೆಯ ಪ್ರಶಸ್ತಿ ಗೆದ್ದುಕೊಂಡಿದೆ.

ಉಚಿತ ವೀಕ್ಷಣೆ: ಕುಂಭ ಸಂಕ್ರಮಣದ ಪ್ರಯುಕ್ತ ಫೆ.12ರಂದು ಸಂಜೆ 6.30ರಿಂದ 8.30ತನಕ ಹುಣ್ಣಿಮೆಯ ಚಂದ್ರ ಮತ್ತು ಆಕಾಶದಲ್ಲಿ ಸರಳ ರೇಖೆಯಲ್ಲಿ ಬರಿಗಣ್ಣಿನಲ್ಲಿ ಗೋಚರಿಸುವ ಗುರು ಮತ್ತು ಮಂಗಳ ಗ್ರಹಗಳನ್ನು ಸಾರ್ವಜನಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ವೀಕ್ಷಣೆಗೆ ಪರ್ಕಳದ ಪಾಟೀಲ್ ಕ್ಲೋತ್ ಸ್ಟೋರ್ ಬಳಿ ವ್ಯವಸ್ಥೆ ಕಲ್ಪಿಸಲಾಗಿದೆ. ಖಗೋಳ ಆಸಕ್ತರು ಈ ದೂರವಾಣಿ ಸಂಖ್ಯೆ 9845690278ನ್ನು ಸಂಪರ್ಕಿಸಬಹುದು ಎಂದು ಕಾರ್ಯಕ್ರಮ ಸಂಘಟಕ ಗಣೇಶ್‌ರಾಜ್ ಸರಳಬೆಟ್ಟು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News