ಮಹಿಳೆಗೆ ಆನ್‌ಲೈನ್‌ನಲ್ಲಿ 7 ಲಕ್ಷ ರೂ. ವಂಚನೆ: ಪ್ರಕರಣ ದಾಖಲು
Update: 2024-06-29 21:53 IST
ಕಾರ್ಕಳ, ಜೂ.29: ಆನ್‌ಲೈನ್ ಕೆಲಸಕ್ಕೆ ಸಂಬಳ ನೀಡುವುದಾಗಿ ನಂಬಿಸಿ ಮಹಿಳೆಯೊಬ್ಬರಿಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುಷ್ಪಾ(32) ಎಂಬವರು ಆನ್‌ಲೈನ್ ವೆಬ್‌ಸೈಟ್ ಮೂಲಕ ಕಂಪೆನಿ ಯೊಂದಕ್ಕೆ ಲಸಕ್ಕೆ ಸೇರಿಕೊಂಡಿದ್ದು ಕಂಪನಿಯವರು ಕೆಲಸ ಮಾಡಿದ ಸಂಬಳದ ನೀಡುವುದಾಗಿ ನಂಬಿಸಿ, ಪುಷ್ಪಾ ಅವರಿಂದ 7,00,000ರೂ. ಹಣವನ್ನು ಕಂಪನಿಯ ಬೇರೆ ಬೇರೆ ಅಕೌಂಟ್‌ಗೆ ಹಂತ ಹಂತವಾಗಿ ಹಾಕಿಸಿ ಕೊಂಡು ಮೋಸ ಮಾಡಿರುವುದಾಗಿ ದೂರಲಾಗಿದೆ.