×
Ad

ವಿದ್ಯಾಪೋಷಕ್ ವಿದ್ಯಾರ್ಥಿನಿಗೆ 76ನೆಯ ಮನೆ ಹಸ್ತಾಂತರ

Update: 2025-06-15 17:29 IST

ಕುಂದಾಪುರ, ಜೂ.15: ದ್ವಿತೀಯ ಪಿಯುಸಿ ವಿದ್ಯಾಪೋಷಕ್ ವಿದ್ಯಾರ್ಥಿನಿ ಸುಶ್ಮಿತಾ ಅವರಿಗೆ ಕುಂದಾಪುರ ತಾಲೂಕಿನ ಮೂಡುಮುಂದದ ಮೋರ್ಟು ವಿನಲ್ಲಿ ತಮ್ಮ ಮೂವತ್ತನೇ ವರ್ಷದ ವಿವಾಹ ಮಹೋತ್ಸವದ ಸವಿನೆನಪಿಗಾಗಿ 6.50 ಲಕ್ಷ ರೂ. ವೆಚ್ಚದಲ್ಲಿ ಇಂಡಿ ವಿಲೇಜ್‌ನ ಸಂಸ್ಥಾಪಕ ಶ್ರೀಕಾಂತ್ ಕೆ. ಅರಿಮಣಿತ್ತಾಯ ಮತ್ತು ಭಾರತಿ ಶ್ರೀಕಾಂತ್ ದಂಪತಿ ನಿರ್ಮಿಸಿಕೊಟ್ಟ ವಜ್ರಮ್ ಮನೆಯನ್ನು ಅರಿಮಣಿತ್ತಾಯ ದಂಪತಿ ಶನಿವಾರ ಉದ್ಘಾಟಿಸಿದರು.

ಮುಖ್ಯ ಅತಿಥಿಯಾಗಿ ಹಿರಿಯ ಬರಹಗಾರರು, ಶಿಕ್ಷಣತಜ್ಞ ಡಾ.ಬಿ.ಭಾಸ್ಕರ್ ರಾವ್ ಮಾತನಾಡಿದರು. ಭೀಮ ಗೋಲ್ಡ್‌ನ ಪ್ರಮುಖರಾದ ಶ್ರೀಪತಿ ಭಟ್ ಅಭಿನಂದನೆ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಅರಿಮಣಿತ್ತಾಯರ ಮಾತೃಶ್ರೀ ಪುಷ್ಕಳಾ ಕೃಷ್ಣನ್, ಪುತ್ರ ವಿಶಾಲ್ ಅರಿಮಣಿತ್ತಾಯ, ಅಳಿಯ ನಚಿಕೇತ, ನಾಗರಾಜ ಆಚಾರ್ಯ, ಬಾಲಕೃಷ್ಣ ಕೋರ್ನಾಯ, ಸುಬ್ರಮಣ್ಯ ಭಟ್, ಹಯವದ ಭಟ್, ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಸದಸ್ಯರುಗಳಾದ ಯು.ವಿಶ್ವನಾಥ ಶೆಣೈ, ಯು.ಎಸ್.ರಾಜ ಗೋಪಾಲ ಆಚಾರ್ಯ, ವಿಜಯ ಕುಮಾರ್ ಮುದ್ರಾಡಿ, ಭುವನ ಪ್ರಸಾದ್ ಹೆಗ್ಡೆ, ಅನಂತರಾಜ ಉಪಾಧ್ಯ, ಅಶೋಕ ಎಂ., ನಟರಾಜ ಉಪಾಧ್ಯ, ಗಣರಾಜ ಭಟ್, ವಿದ್ಯಾಪ್ರಸಾದ್, ಮಂಜುನಾಥ ಹೆಬ್ಬಾರ್, ಕಿಶೋರ್ ಸಿ.ಉದ್ಯಾವರ, ಗಣೇಶ ಬ್ರಹ್ಮಾವರ, ಗಣಪತಿ ಭಟ್ ಉಪಸ್ಥಿತರಿದ್ದರು.

ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ಎಚ್.ಎನ್. ವೆಂಕಟೇಶ್ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News