ಫೆ.1ರಿಂದ ಉದ್ಯಾವರದಲ್ಲಿ ಬಹುಭಾಷಾ ನಾಟಕೋತ್ಸವ
Update: 2024-01-31 18:45 IST
ಉಡುಪಿ: ನಿರಂತರ್ ಉದ್ಯಾವರ ನೇತೃತ್ವದಲ್ಲಿ 6ನೇ ವರ್ಷದ ನಿರಂತರ್ ಬಹುಭಾಷಾ ನಾಟಕೋತ್ಸವವು ಫೆ.1ರಿಂದ ಫೆ.4ರವರೆಗೆ ಸಂಜೆ ಗಂಟೆ 6:30ಕ್ಕೆ ಐಸಿವೈಎಂ ಉದ್ಯಾವರ ಸುವರ್ಣ ಮಹೋತ್ಸವ ಸ್ಮಾರಕ ವೇದಿಕೆಯಲ್ಲಿ (ಚರ್ಚ್ ವಠಾರ) ನಡೆಯಲಿದೆ.
ಫೆ.1ರಂದು ಮಂಗಳೂರು ಸಂತ ಅಲೋಶಿಯಸ್ ಕಾಲೇಜಿನ ರಂಗ ಅಧ್ಯಯನ ಕೇಂದ್ರದ ಕ್ಲಾನ್ವಿನ್ ಫೆರ್ನಾಂಡಿಸ್ ಇವರ ನಿರ್ದೇಶನದ ರಂಗ ಗೀತೆಗಳು ಮತ್ತು ’ಹ್ಯಾಂಗ್ ಆನ್’(ಕನ್ನಡ), ಫೆ.2ರಂದು ಸಂಗಮ ಕಲಾವಿದೆರ್ ಮಣಿಪಾಲ ಇವರಿಂದ ತುಳು ನಾಟಕ ’ಮರಣಗೆಂದಿನಾಯೆ’, ಫೆ.3ರಂದು ಅಸ್ತಿತ್ವ ಮಂಗಳೂರು ತಂಡದಿಂದ ’ಜುಗಾರಿ’(ಕೊಂಕಣಿ) ಮತ್ತು ಫೆ.4ರಂದು ಮಂಗಳೂರು ಲೋಗೋಸ್ ಥಿಯೇಟರ್ ಗ್ರೂಪ್‌ನಿಂದ ’ದಾದ್ಲ್ಯಾಟ ಮಧೆಟ ತುಟ ಸದೆಟವ್’ ಕೊಂಕಣಿ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.