ಆ.17: ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ
Update: 2025-08-12 18:20 IST
ಉಡುಪಿ, ಆ.12: ಉಡುಪಿ ತುಳುಕೂಟದ ವತಿಯಿಂದ ಮೂವತ್ತನೇ ವರ್ಷದ ವಿಶ್ವಪ್ರಭಾ ಪ್ರಾಯೋಜಿತ ಪಣಿಯಾಡಿ ಕಾದಂಬರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆ.17ರಂದು ಸಂಜೆ 4 ಗಂಟೆಗೆ ಉಡುಪಿ ಕಿದಿಯೂರು ಹೋಟೆಲ್‌ನ ಪವನ್ ರೂಪ್‌ಟಾಪ್ ಸಭಾಂಗಣದಲ್ಲಿ ನಡೆಯಲಿದೆ.
ತುಳುಕೂಟದ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆಯಲ್ಲಿ ಕೊಡವೂರು ಮೂಲದ ಮುಂಬೈಯ ಶಾರದಾ ಎ.ಅಂಚನ್ ಅವರ ‘ಅಕೇರಿದ ಎಕ್’ ಕಾದಂಬರಿಗೆ ಪಣಿಯಾಡಿ ಪ್ರಶಸ್ತಿ ಪ್ರದಾನ ಮಾಡ ಲಾಗುವುದು. ಪುಸ್ತಕ ಪರಿಚಯವನ್ನು ಸುಲೋಚನಾ ಜನಾದರ್ನ್ ಮಾಡಲಿದ್ದಾರೆ. ಇದೆ ಸಂದರ್ಭದಲ್ಲಿ ಎಸೆಸೆಲ್ಸಿ ಪರೀಕ್ಷೆಯಲ್ಲಿ ತುಳು ಪಾಠದಲ್ಲಿ ಶೇ.100 ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.